ನಗರದ ಪೆಂಡರಾಗಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೌಥ್ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ್, ಮಾಸ್ಕ್, ಆ್ಯಕ್ಸಿ ಮೀಟರ್‍ರನ್ನು ಶಾಲೆಯ ಮೂಖ್ಯೋಪಾಧ್ಯಕಿ ದೀಪಾ ಹಿರೇಗೌಡರ ಸಮ್ಮುಖದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‍ನ ಅಧ್ಯಕ್ಷ ಮಂಜುನಾಥ ಹೊಂಬಳ, ಕಾರ್ಯದರ್ಶಿ ಉದಯಕುಮಾರ ಬೆಂಡಿಗೇರಿ, ಅನೀಲಕುಮಾರ ಜೈನ್, ಅಶೋಕ ದಾನಿ, ಹನಮಂತಸಾ ಸವಣೂರ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.