
ಕಲಬುರಗಿ,ಆ.21: ಮರಗಳನ್ನು ಪ್ರತಿಯೊಬ್ಬರೂ ರಕ್ಷಿಸಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಿವಚಂದ್ರ ರತ್ನಾಪೂರಕರ್ ಅವರು ಕರೆ ನೀಡಿದರು.
ನಗರದ ಸಾಯಿ ನಗರದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್‍ಟೌನ್ ಮತ್ತು ಇನ್ನವ್ಹೀಲ್ ಕಲ್ಬ್ ಆಫ್ ಗುಲಬರ್ಗಾ ಮಿಡ್‍ಟೌನ್ ವತಿಯಿಂದ ವಿವಿಧ ಸ್ಥಳಗಳಲ್ಲಿ 130 ಸಸಿ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಉಸಿರಾಡಲು ಬೇಕಾಗುವ ಗಾಳಿ, ಬಿಸಲಿನಿಂದ ರಕ್ಷಣೆಗಾಗಿ ನೆರಳು ಕೊಡುವ ಮರಗಳನ್ನು ಉಳಿಸಿ-ಬೆಳಸುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಅನಂತ್ ಚಿಂಚೂರೆ, ಇನ್ನರ್‍ವ್ಹಿಲ್ ಕ್ಲಬ್ ಅಧ್ಯಕ್ಷೆ ಲಾವಣ್ಯ ಮುರಲೀzsರ್, ಕಾರ್ಯದರ್ಶಿ ಸ್ನೇಹಲತಾ ನಾಯಕ್, ಕಾರ್ಯಕ್ರಮದ ಪ್ರೊಜೆಕ್ಟರುಗಳಾದ ವೆಂಕಟೇಶ್ ಮಲ್ಲಾಬಾದಿ, ಅಮರನಾಥ್ ಪಪ್ಪಾ, ಎಂ. ಮುರಲೀಧರ್, ಕೆ.ಎಸ್. ರಾಠೋಡ್, ಶ್ರೀಪಾದ್ ಆತನೂರ್, ರೋಟರಿ ಕೋ-ಆರ್ಡಿನೇಟರ್‍ರಾದ ಮಲ್ಲಿಕಾರ್ಜುನ್ ಬಿರಾದಾರ್ ಸೇರಿದಂತೆ ಸದಸ್ಯರು, ಬಡಾವಣೆಯ ಮುಖಂಡರು ಉಪಸ್ಥಿತರಿದ್ದರು.