130 ದಶಲಕ್ಷ ಜನರಿಗೆ ಲಸಿಕೆ

ನವದೆಹಲಿ,ಏ.೨೧- ದೇಶದಲ್ಲಿ ಕೊರೊನಾ ಸೋಂಕಿನ ಮಧ್ಯೆಯೂ ನಿನ್ನೆ ರಾತ್ರಿಯವರೆಗೂ ೧೩೦ ದಶಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇದರಲ್ಲಿ ೯,೨೦೧,೦೪೦ ಆರೋಗ್ಯ ಕಾರ್ಯಕರ್ತರು ಈಗಾಗಲೇ ಮೊದಲ ಲಸಿಕೆ ಪಡೆದಿದ್ದಾರೆ. ೫,೮೧೬,೫೩೮ ಆರೋಗ್ಯ ಕಾರ್ಯಕರ್ತರು ೨ನೇ ಲಸಿಕೆ ಪಡೆದಿದ್ದಾರೆ. ಒಟ್ಟಾರೆ ೧೩೦,೦೨೭,೩೭೦ ಮಂದಿ ಲಸಿಕೆ ಪಡೆದಿದ್ದಾರೆ.
೧,೧,೫೫೯,೨೧೮ ಮುಂಚೂಣಿ ಕಾರ್ಯಕರ್ತರು ಮೊದಲ ಲಸಿಕೆ ಪಡೆದಿದ್ದಾರೆ. ಅದೇ ರೀತಿ ೫,೮೫೨,೬೯೯ ಮುಂಚೂಣಿ ಕಾರ್ಯಕರ್ತರು ೨ನೇ ಡೋಸ್ ಪಡೆದಿದ್ದಾರೆ.
೪೫ ರಿಂದ ೫೯ ವರ್ಷದ ವಯೋಮಾನದವರಿಗೆ ೪೩,೪೮೫,೭೫೨ ಜನರು ಮೊದಲ ಡೋಸ್ ಪಡೆದಿದ್ದರೆ, ೧,೪೯೦,೪೬೦ ಜನರು ೨ನೇ ಲಸಿಕೆ ಪಡೆದಿದ್ದಾರೆ.
೬೦ ವರ್ಷದ ಮೇಲ್ಪಟ್ಟ ವಯೋಮಾನದವರ ಪೈಕಿ ೪೭,೩೩೧,೩೨೬ ಮಂದಿ ಮೊದಲ ಡೋಸ್ ಪಡೆದರೆ ೫,೨೯೦,೩೦೬೭ ಮಂದಿ ೨ನೇ ಡೋಸ್ ಪಡೆದಿದ್ದಾರೆ.
ನಿನ್ನೆ ಸಂಜೆ ೮ ಗಂಟೆವರೆಗೆ ೨,೮೯೮,೨೫೭ ಮಂದಿಗೆ ಲಸಿಕೆ ನೀಡಲಾಗಿದೆ. ೧,೯೧೮,೧೫೫ ಮಂದಿಗೆ ಮೊದಲ ಡೋಸ್ ಹಾಗೂ ೯೮೦,೧೦೨ ಮಂದಿಗೆ ೨ನೇ ಡೋಸ್ ಲಸಿಕೆ ನೀಡಲಾಗಿದೆ.