13 ರಂದು ನೂತನ ವಿದ್ಯಾ ಪೆÇೀಷಣ ನಿಧಿ ಉದ್ಘಾಟನೆ

ಕಲಬುರಗಿ ನ10: ನೂತನ ವಿದ್ಯಾಲಯ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳಿಂದ ನ.13 ರಂದು ಸಂಜೆ 6ಕ್ಕೆ ನೂತನ ವಿದ್ಯಾ ಪೆÇೀಷಣ ನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಖ್ಯಾತ ಹಾಸ್ಯ ಉಪನ್ಯಾಸಕ ಗಂಗಾವತಿ ಪ್ರಾಣೇಶ ಉದ್ಘಾಟಿಸುವರು ಎಂದು ಮಾಜಿ ವಿದ್ಯಾರ್ಥಿಗಳ ಸಂಘದ ರವಿ ಲಾತೂರಕರ್ ಮತ್ತು ಸುಹಾಸ ಖಣಗೆ ತಿಳಿಸಿದ್ದಾರೆ.
ಖ್ಯಾತ ಉದ್ಯಮಿ ಸಂಜೀವ ಗುಪ್ತಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಎನ್‍ವಿ ಸಂಸ್ಥೆ ಅಧ್ಯಕ್ಷ ಡಾ.ಗೌತಮ್ ಜಾಗೀರದಾರ, ಕಾರ್ಯದರ್ಶಿ ಅಭಿಜಿತ ದೇಶಮುಖ, ಮಾಜಿ ವಿದ್ಯಾಥಿ ಸಂಘದ ಅಧ್ಯಕ್ಷ ವಿದ್ಯಾಧರ ಮುರುಗರಕರ್, ಕಾರ್ಯದರ್ಶಿ ಡಾ. ಗಿರೀಶ ಗಲಗಲಿ ವೇದಿಕೆಯಲ್ಲಿ ಇರುವರು ಎಂದು ಅವರು ತಿಳಿಸಿದ್ದಾರೆ.
ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಪೆÇೀಷಣ ನಿಧಿ ಆರಂಭಿಸಲಾಗುತ್ತಿದೆ. ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ನೀಡಲು ಈ ನಿಧಿ ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರ್.ಜೆ.ಕಾಲೇಜಿನ ಪ್ರಾಚಾರ್ಯ ಡಾ.ಪ್ರಹ್ಲಾದ ಬುರ್ಲಿ, ಜಯತೀರ್ಥ ಕಲ್ಯಾಣ ಮಂಟಪದ ಮಾಲೀಕ ಬಾಲಕೃಷ್ಣಲಾತೂರಕರ್, ದೀಪಾ ಏಜೆನ್ಸಿಯ ಶಿವರಾಜ ಖೂಬಾ, ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ನಿತೀನ್ ನಾಯಕ್, ದಿಗಂಬರ ನಾಯಕ ನೇತ್ರ ತಜ್ಞ ಡಾ.ಉದಯ ಪಾಟೀಲ್, ಉದ್ಯಮಿ ರಂಗನಾಥ ದೇಸಾಯಿ ಮಹಾ ಪೆÇೀಷಕರಾಗಿ ಪೆÇೀಷಣ ನಿಧಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.