13 ನಾಮಪತ್ರಗಳ ಸಲ್ಲಿಕೆ

ಬೀದರ. ಏ.20: ಲೋಕಸಭಾ ಸಾರ್ವತ್ರಿಕ ಚುನಾವಣೆ- 2024 ರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬೀದರ- 07 ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಏಪ್ರಿಲ್. 19 ರಂದು 13 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಕ್ಷೇತರ ಅಭ್ಯರ್ಥಿಗಳಾಗಿ ಜಯರಾಜ ತಂದೆ ಕಾಶಪ್ಪಾ ಬುಕ್ಕಾ, ಅಬ್ದುಲ್ ರಜಾಕ್, ಡಾ. ದಿನಕರ ಮೋರೆ, ಮಹೇಶ ಕುಮಾರ ತಂದೆ ಪ್ರಭಾಕರ್ ರಾವ್ ಗವಂಡೆ. ಕಲ್ಲಾಲಿಂಗ ತಂದೆ ಈಶ್ವರಪ್ಪ ಹೂಗಾರ, ಗೌತಮ ಮೋರೆ, ಪರಮೇಶ್ವರ ಪಾಟೀಲ, ಗೋಪಾಲ ಮಾರುತಿ, ರಾಮವಿಲಾಸ್ ನಾವಂದರ್ ಹಾಗೂ ಬಸಪ್ಪ ರಾಂಪೂರೆ ಅವರು ನಾಮಪತ್ರಗಳನ್ನು ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಪರವಾಗಿ ಅವರ ಸೂಚಿತ ವ್ಯಕ್ತಿ ಮಲ್ಲಿಕಾರ್ಜುನ ಪಾಟೀಲ ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಶಿವರಾಜ ನಾಮಪತ್ರ ಸಲ್ಲಿಸಿದರು. ಆರ್.ಪಿ.ಐ ಬಿ ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮೀಪುತ್ರ ಮಾಳಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಏಪ್ರಿಲ್. 19 ಕೊನೆಯ ದಿನವಾಗಿತ್ತು. ಏಪ್ರಿಲ್. 19 ರಂದು 13 ನಾಮಪತ್ರಗಳು ಸಲ್ಲಿಕೆಯಾಗಿವೆ.. ಏಪ್ರಿಲ್. 22 ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನವಾಗಿದೆ. 07- ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಏಪ್ರಿಲ್. 12 ರಿಂದ 19 ರವರೆಗೆ ಒಟ್ಟು 34 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.