13 ಡೆಂಗ್ಯೂ,6ಚಿಕೂನ್‍ಗುನ್ಯಾ ಪ್ರಕರಣ ಪತ್ತೆ;ಡಾ. ರಾಜಶೇಖರ ಮಾಲಿ

ಕಲಬುರಗಿ,ಜೂ 7:ರಾಜ್ಯದಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳು
ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಕಲಬುರಗಿನಗರದಲ್ಲಿಯೂ ಪ್ರಕರಣಗಳು ಅಲ್ಲಲ್ಲಿಕಾಣಿಸಿಕೊಳ್ಳುತ್ತಿದ್ದು ಈ ನಿಟ್ಟಿನಲಿ ಈಗಾಗಲೇ ನಗರದ ವಿವಿದ
ಬಡಾವಣೆಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಜನೆವರಿ 2023 ರಿಂದ
ಇಲ್ಲಿಯವರೆಗೆ ದಾಖಲಾದ ರೋಗಿಗಳ 158 ರಕ್ತದಮಾದರಿಗಳನ್ನು ತೆಗೆದುಕೊಂಡು ಅವುಗಳಲ್ಲಿ 13 ಖಚಿತ ಡೆಂಗ್ಯೂಪ್ರಕರಣಗಳು ಕಾಣಿಸಿಕೊಂಡಿವೆ ಹಾಗೂ ಚಿಕೂನ್ ಗುನ್ಯಾ 151ರಕ್ತದ ಮಾದರಿಗಳಲ್ಲಿ 6 ಖಚಿತ ಪ್ರಕರಣಗಳು ಕಾಣಿಸಿಕೊಂಡಿವೆ.ಜನೆವರಿಯಿಂದ ಇಲ್ಲಿಯವರೆಗೆ ಯಾವುದೇ ಡೆಂಗ್ಯೂ ಖಚಿತ ಪ್ರಕರಣಗಳ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಅಧಿಕಾರಿ ಡಾ. ರಾಜಶೇಖರ ಮಾಲಿ ತಿಳಿಸಿದ್ದಾರೆ.
ಈ ಜ್ವರವು ಸಾಮಾನ್ಯ ವೈರಸ್ ನಿಂದಬರುವುದಾಗಿದ್ದು ಇಂತಹ ಜ್ವರ ಪ್ರಕರಣಗಳಿಗೆಪ್ಯಾರಾಸಿಟಾಮೋಲ್ ಮಾತ್ರೆಗಳನ್ನು ನೀಡುವದರ ಮೂಲಕ
ಶೇ 90 ರೋಗಿಗಳು ಪ್ರಾಥಮಿಕ ಚಿಕಿತ್ಸೆದಿಂದಲೇಗುಣಮುಖಹೊಂದುತ್ತಾರೆ, ಆದರೆ ಪ್ರತಿಶತ 5 ರಿಂದÀ 10ರಷ್ಟು ರೋಗಿಗಳು ಕೆಲವೊಂದು ಕ್ಲಿಷ್ಟಕರ
ಸಂದರ್ಭಗಳಿಗೆ ಒಳಗಾದಂತಹ ಸಂದರ್ಭದಲ್ಲಿ ಜಿಲ್ಲಾಆಸ್ಪತ್ರೆಯಲ್ಲಿಯೇ ಇಂತಹ ರೋಗಿಗಳಿಗಾಗಿಯೇ ಒಂದುವಿಶೇಷ ವಾರ್ಡನ್ನು ಕೂಡಾ ಮೀಸಲಿರಿಸಲಾಗಿದೆ.
ಈ ಜ್ವರವು ಈಡೀಸ್ ಎಂಬ ಒಂದು ಜಾತಿಯ ಸೋಂಕಿತಸೊಳ್ಳೆ ಕಚ್ಚುವುದರಿಂದ ಬರುವುದರಿಂದ ಇದು ಸಾಮಾನ್ಯವಾಗಿಮನೆಯ ಹೊರಗಡೆ ಹಾಗೂ ಒಳಗಡೆ ಶೇಖರಿಸಿಟ್ಟಸ್ವಚ್ಛವಾದ ನೀರು ಹಾಗೂ ಮನೆಯ ಹೊರಗಡೆ ಬಿಸಾಕಿದ ಘನತಾಜ್ಯವಸ್ತುಗಳಾದ ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಕಪ್ಪು
ಹಾಗೂ ಇನ್ನಿತರ ಘನ ತ್ಯಾಜ್ಯ ವಸ್ತುಗಳಲ್ಲಿ ನಿಂತ ನೀರಿನಲ್ಲಿ
ಮೊಟ್ಟೆ ಇಟ್ಟು ಸಂತತಿ ಯನ್ನು ಬೆಳೆಸುತ್ತವೆ. ಹೀಗಾಗಿಸಾರ್ವಜನಿಕರು ತಮ್ಮ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲಿರುವ ಶೇಖರಸಿಟ್ಟ ನೀರನ್ನು ವಾರದಲ್ಲಿ ಎರಡು ಬಾರಿ ಖಾಲಿಮಾಡಿ ತಿಕ್ಕಿ ತೊಳೆದು ಒಣಗಿಸಿ ನೀರಿನ ತೊಟ್ಟಿಗಳನ್ನು ಭದ್ರವಾಗಿಮುಚ್ಚಿಡುವುದರಿಂದ ಸೊಳ್ಳೆಯ ಸಂತತಿಯನ್ನು ಕಡಿಮೆ ಮಾಡಬಹುದಾಗಿದೆ. ಈ ಸೊಳ್ಳೆ ದಿನದ ಹೊತ್ತಿನಲ್ಲಿಯೇ
ಕಚ್ಚುವುದುರಿಂದ ಮನೆಯಲ್ಲಿರುವವರು ದಿನ ಹೊತ್ತಿನಲ್ಲಿಯೂ ಮೈತುಂಬ ಬಟ್ಟೆಯನ್ನು ಹೊದ್ದಿಕೊಂಡು ಅಥವಾ ಸೊಳ್ಳೆ ಪರದೆಯನ್ನು
ಕಟ್ಟಿಕೊಂಡು ಮಲಗಿಕೊಳ್ಳುವುದುದನ್ನು ರೂಡಿಸಿಕೊಂಡರೆ ಈ ರೋಗದಂತೆ ತಡೆಯಬಹುದು.ಒಂದು ವೇಳೆ ಜ್ವರ ಮೈಕೈ ನೋವು ,ಕಣ್ಣಿನ
ಹಿಂಬಾಗದಲ್ಲಿ ನೋವು ,ಹಾಗೂ ಮೈಮೇಲೆ ರಕ್ತದಗಾದರಿಗಳು ಹಾಗೂ ಈ ಸಂಭಂದಿತವಾಗಿ ಯಾವುದೇತೆರನಾದಂತಹ ಜ್ವರ ಪ್ರಕರಣಗಳು ಕಾಣಿಸಿಕೊಂಡರೆಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸೌಲಭ್ಯ
ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಹೋಗಿ ಹಣವನ್ನು ವ್ಯಯಿಸಿಕೊಳ್ಳಬಾರದೆಂದು ಡಾ. ರಾಜಶೇಖರ ಮಾಲಿ ತಿಳಿಸಿದ್ದಾರೆ.