13ರಿಂದ ಶ್ರೀ ಸಿದ್ಧಬಸವೇಶ್ವರರ ಜಾತ್ರೆ

ಕಲಬುರಗಿ,ಜ.11: ಕಮಲಾಪುರ ತಾಲೂಕಿನ ಸುಕ್ಷೇತ್ರ ಮುತ್ಯಾನ ಬಬಲಾದ ಗ್ರಾಮದಲ್ಲಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ಶ್ರೀ ಸಿದ್ಧಬಸವೇಶ್ವರರ 68ನೇ ಜಾತ್ರಾ ಮಹೋತ್ಸವವು ಜ.13ರಿಂದ 15ರವರೆಗೂ ನಡೆಯಲಿದೆ ಎಂದು ಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
13ರಂದು ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಸಂಜೆ 7ಕ್ಕೆ ಗ್ರಾಮದೇವತೆಗಳಿಗೆ ಎಣ್ಣೆ, ಕುಂಕುಮ ಧರಿಸುವುದು.
14ರಂದು ಬೆಳಗ್ಗೆ 6 ಗಂಟೆಗೆ ಪೂಜ್ಯ ಶ್ರೀ ಲಿಂ. ಗುರುಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುಧ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಂಜೆ ಶ್ರೀ ಸಿದ್ಧಬಸವೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಖ, ಸಹಸ್ರ ಬಿಲ್ವಾರ್ಚನೆ, ಮತ್ತು ಸಂಜೆ 6ಕ್ಕೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.030ಕ್ಕೆ ನಂತರ ಧಾರ್ಮಿಕ ಸಭೆ ಹಮ್ಮಿಕೊಳ್ಳಲಾಗಿದ್ದು, ಶ್ರೀ ಗುರುಪಾದಲಿಂಗ ಶಿವಯೋಗಿಗಳ ಸಾನಿಧ್ಯ, ಮಾದನಹಿಪ್ಪರಗಾದ ಶ್ರೀ ಶಾಂತವೀರ ಶಿವಾಚಾರ್ಯರು, ಸೋಂತ ಮತ್ತು ಕಲಮೂಡ ಗ್ರಾಮದ ಶಂಕರಲಿಂಗ ಮಹಾರಾಜರು, ರಟಕಲ್‍ನ ಶ್ರೀ ಸಿದ್ಧರಾಮ ಶಿವಾಚಾರ್ಯರು, ಪಹಾಡ ಕೋಹಿನೂರ ದರ್ಗಾದ ಪೂಜ್ಯ ಶ್ರೀ ಬಿಸ್ಮಿಲ್ಲಾ ಶಹಾ ಪ್ಯೂಜರ ಸಮ್ಮುಖದಲ್ಲಿ ನಡೆಯುವ ಸಭೆಯನ್ನು ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಲಿದ್ದಾರೆ. ಕೆಕೆಆರ್‍ಡಿಬಿ ಅಧ್ಯಕ್ಷರು, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕ ಸುಭಾಷ ಆರ್. ಗುತ್ತೇದಾರ, ಎಂಎಲ್ಸಿ ಬಿ.ಜಿ. ಪಾಟೀಲ್, ಮಾಜಿ ಸಚಿವ ರೇವೂನಾಯಕ ಬೆಳಮಗಿ, ವಿಜಕುಮಾರ ಜಿ. ರಾಮಕೃಷ್ಣ, ಶರಣಬಸವಪ್ಪ ಪಾಟೀಲ್ ಅಷ್ಟಗಿ, ಶಿವಪ್ರಭು ಪಾಟೀಲ್, ವೈಜನಾಥ ತಡಕಲ, ಸಂದೀಪ ಬಬಲಾದ ಸೇರಿ ಇತರರು ಭಾಗವಹಿಸಲಿದ್ದಾರೆ.
ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 11 ಗಂಟೆಗೆ ಶ್ರೀ ಬಾಲೇ ಸಾಹೇಬ ಜವಳಗಿಯಿಂದ ಪಲ್ಲಕ್ಕಿ, ಕೊಟ್ಟರಗಿ ಗ್ರಾಮದಿಂದ ನಂದಿಕೋಲು ಹಾಗೂ ಸ್ಥಳೀಯ ಗ್ರಾಮದ ಅರ್ಜುನ ಹಣಮಂತ ಶೇಕಸಂದಿ ಇವರಿಂದ ನಂದಿಕೋಲುಗಳ ಮೆರವಣಿಗೆ ನಡೆಯಲಿದೆ. ನಂತರ ಹೋಮ ಹವನ ಜರುಗಲಿದೆ.
15ರಂದು ಬೆಳಗ್ಗೆ 9ರಿಂದ 11ವರೆಗೂ ಮತ್ತು 3ರಿಂದ 5 ಗಂಟೆಯವರೆಗೂ ಜಂಗಿ ಕುಸ್ತಿ, ಗೀಗಿಪದಗಳು ನಡೆಯಲಿದೆ. ನಂತರ ರಾತ್ರಿ 8 ಗಂಟೆಗೆ ಪಹಾಡ ಕೋಹಿನೂರ ದರ್ಗಾದ ಪೂಜ್ಯ ಶ್ರೀ ಬಿಸ್ಮಿಲ್ಲಾ ಶಹಾ ಇವರ ಅಧ್ಯಕ್ಷತೆಯಲ್ಲಿ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ಹಾಗೂ ಸಂಗೀತ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.