13ನೇ ಜೂನಿಯರ್ ಮಿಸ್ಟ್‍ರ ಇಂಡಿಯಾ ಸ್ಪರ್ಧೆಯಲ್ಲಿ ಮಿಂಚಿದ ಕನ್ನಡ ಪ್ರತಿಭೆ ವಿಜಯನಗರದ ಶ್ರೀವರ್ಧನ್‍ರೆಡ್ಡಿ 4ನೇ ಸ್ಥಾನಸಂಜೆವಾಣಿ ವಾರ್ತೆ
ಹೊಸಪೇಟೆ ಮಾ8: ಕೇಂದ್ರ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವಾಲಯ ಆಯೋಜಿಸಿದ್ದ 13ನೇ ಜೂನಿಯರ್ ಮಿಸ್ಟರ್ ಇಂಡಿಯಾ ರಾಷ್ಟೀಯ ಕ್ರೀಡಾ ಸ್ಪರ್ಧೆಯಲ್ಲಿ ಕನ್ನಡಿಗ ಪಿ.ಶ್ರೀವರ್ಧನ ರೆಡ್ಡಿ 4ನೇ ಸ್ಥಾನವನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇಂಡಿಯನ್ ಬಾಡಿಬಿಲ್ಡರ್ಸ್ ಫೆಡರೇಷನ್ ಸಹಯೋಗದಲ್ಲಿ ಕ್ರೀಡಾ ಸಚಿವಾಲಯ ಮಧ್ಯಪ್ರದೇಶದ ರತ್‍ಲಂನಲ್ಲಿ ಹಮ್ಮಿಕೊಂಡಿದ್ದ 13ನೆ ಜೂನಿಯರ್ಸ್ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಕನ್ನಡಿಗನೊಬ್ಬ ಪ್ರಶಸ್ತಿ ಪಡೆದ ಕೀರ್ತಿಗೆ ಭಾಜನವಾಗಿದ್ದಾನೆ.
ಹೊಸಪೇಟೆಯ ಆರ್ಯುವೇದ ವೈದ್ಯ ಡಾ.ಮುನಿವಾಸುದೇವ ರೆಡ್ಡಿ ಮತ್ತು ಡಾ.ಮಾಧವಿರವರ ತಮ್ಮ ಪಿ.ಸುಧಾಕರ ರೆಡ್ಡಿ ಹಾಗೂ ಡಾ. ತುಳಸಿ ರವರ ಪುತ್ರ ಶ್ರೀವರ್ಧನರೆಡ್ಡಿ ಹೊಸಪೇಟೆಯ ಜೇಸಿಸ್ ಹಾಗೂ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ, ಪದವಿ ಪೂರ್ವ ಶಿಕ್ಷಣವನ್ನು ಸುರಭಿ ಶಿಕ್ಷಣ ಸಂಸ್ಥೆಯಲ್ಲಿ ಪಡೆದು ಇದೀಗ ತಾಂತ್ರಿಕ ಶಿಕ್ಷಣವನ್ನು ಹುಬ್ಬಳ್ಳಿಯ ಕೆಎಲ್‍ಇ ಇಂಜಿನಿಯರಿಂಗ್ ಸಂಸ್ಥೆಯ ಪಡೆಯುತ್ತಿದ್ದಾರೆ. ರೈಲ್ವೆ ರಕ್ಷಿತ್ ಆರ್ ಕೊಟ್ಟಿಯನ್ ಇವರಲ್ಲಿ ಬಾಡಿಬಿಲ್ಡಿಂಗ್ ತರಬೇತಿ ಪಡೆಯುತ್ತಿದ್ದು ಭಾನುವಾರ ಮತ್ತು ಸೋಮವಾರ ನಡೆದ ಸ್ಪಧೆಯಲ್ಲಿ  4ನೇ ಸ್ಥಾನವನ್ನು ಪಡೆಯುವ ಮೂಲಕ ನೂತನ ವಿಜಯನಗರಕ್ಕೆ ಕೀರ್ತಿ ತಂದಿದ್ದಾ