ದಾವಣಗೆರೆ ಜಿಲ್ಲಾ ಆಯುಷ್ ವೈದ್ಯರ ಸಂಘದ ವತಿಯಿಂದ ಆ.ಕು.ಕ.ವೈದ್ಯರುಗಳಿಗೆ ನೀಡಲಾಗಿರುವ ವಿಶೇಷ ಭತ್ಯೆಯನ್ನು ಆಯುಷ್ ವೈದ್ಯರುಗಳಿಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ, ಖಜಾಂಚಿ ಡಾ.ಸುರೇಶ್ ಕುಮಾರ್ , ಕಾರ್ಯದರ್ಶಿ ಡಾ.ಸಿದ್ದೇಶ್ , ರಾಜ್ಯ ಸಂಘಟನೆಯ ಕಾರ್ಯದರ್ಶಿ ಡಾ.ಚಂದ್ರಕಾಂತ ನಾಗಸಮುದ್ರ, ಹಿರಿಯ ವೈದ್ಯರುಗಳಾದ ಡಾ.ಯಶವಂತ,ಡಾ.ಯೋಗೇಂದ್ರ ಕುಮಾರ್, ಡಾ.ದ್ಯಾವನಗೌಡ, ಡಾ.ಶಾಂತಮೂರ್ತಿ ಇದ್ದರು.