ರಾಮದುರ್ಗದಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿದ್ದ ಹಲಗತ್ತಿಯ ನೇಕಾರ ರಮೇಶ ನೀಲಕಂಠಪ್ಪ ಹವಳಕೊಡರ ಪತ್ನಿಗೆ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ರೂ. 90 ಸಾವಿರ ಚೆಕ್ಕನ್ನು ಶಾಸಕ ಮಹಾದೇವಪ್ಪ ಯಾದವಾಡ ವಿತರಿಸಿದರು. ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪಕಾರ್ಯದರ್ಶಿ ವಾಸುದೇವ ದೊಡಮನಿ, ಸತೀಶ ಕಾಪ್ಸೆ, ಶ್ರೀನಿವಾಸ ಕುರುಡಗಿ, ಮೃತನ ತಂದೆ ನೀಲಕಂಠೆಪ್ಪ ಹವಳಕೊq,À ಬಸಪ್ಪ ಸದಾಶಿವನವರ ಹಾಜರಿದ್ದರು.