ಬಾದಾಮಿ ವಿಧಾನ ಪರಿಷತ್ ಸದಸ್ಯರಾಗಿ 2 ನೇ ಬಾರಿಗೆ ಆಯ್ಕೆಯಾದ ಪೆÇ್ರ.ಎಸ್.ವಿ.ಸಂಕನೂರ ಇವರಿಗೆ ಬಾದಾಮಿಯ ಉಪನ್ಯಾಸಕ ಬಳಗದ ವತಿಯಿಂದ ಗದಗ ನಗರದ ಅವರ ನಿವಾಸದಲ್ಲಿ ಭೇಟಿ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕರ ಹಾಗೂ ಉಪನ್ಯಾಸಕರ ಪಿಂಚಣಿ ವ್ಯವಸ್ಥೆ, ಖಾಸಗಿ ಶಾಲೆ, ಕಾಲೇಜುಗಳ ನೇಮಕಾತಿ ಸೇರಿದಂತೆ ವಿವಿದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಈ ಸಮಸ್ಯೆಗಳ ಇತ್ಯರ್ಥಕ್ಕಾಗಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶೀಘ್ರ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗುರುಚನ್ನ ಮಾಳವಾಡ, ಎಮ್.ಐ.ಹುಲ್ಲೂರ, ಬಸವರಾಜ್ ಉಳ್ಳಾಗಡ್ಡಿ, ಸಿದ್ಧಲಿಂಗೇಶ್ವರ ಮುಳ್ಳಾಳ ಹಾಜರಿದ್ದರು.