ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯಲ್ಲಿ ಜ.6ರಂದು ನಡೆಯಲಿರುವ ಕುರುಬರ ಜಾಗೃತಿ ಸಮಾವೇಶದ ಹಂದರಕಂಬ ಪೂಜೆಯನ್ನು ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೆರವೇರಿಸಲಾಯಿತು. ಈ ವೇಳೆ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕುರುಬರ ಎಸ್ಟಿ ಹೋರಾಟ ಸಮಿತಿಯ ಬಿ.ಎಂ.ಸತೀಶ್, ಪಾಲಿಕೆ ಸದಸ್ಯೆ ಎಚ್.ಸಿ.ಜಯಮ್ಮ, ಮುಖಂಡರಾದ ಅಡಾಣಿ ಸಿದ್ಧಪ್ಪ, ಅಣಬೇರು ಶಿವಮೂರ್ತಿ, ಶಿವಣ್ಣ, ಜೆ.ಕೆ.ಕೊಟ್ರಬಸಪ್ಪ, ಜಿ.ಬಸವರಾಜಪ್ಪ ಮತ್ತಿತರರು ಹಾಜರಿದ್ದರು.