ಅಳ್ನಾವರದ ದಿ ಅರ್ಬನ್ ಕೋ ಆಪ್ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಬಸವಣ್ಣೆಪ್ಪ ಜಿ. ಬಾಗೇವಾಡಿ ಅವರನ್ನು ಆಡಳಿತ ಮಂಡಳಿ ಸತ್ಕರಿಸಿ ಆತ್ಮೀಯವಾಗಿ ಬೀಳ್ಕೂಡಲಾಯಿತು. ಅಧ್ಯಕ್ಷ ಬಸವರಾಜ ಬಾಗೆವಾಡಿ, ಉಪಾಧ್ಯಕ್ಷ ರೂಪೇಸ ಗುಂಡಕಲ್, ನಿರ್ದೇಶಕರಾದ ನಾರಾಯಣ ಗಡಕರ, ಎಸ್. ಜಿ. ಜಕಾತಿ, ಛಗನಲಾಲ ಪಟೇಲ, ಮಧು ಬಡಸ್ಕರ್, ದುಂಡಮ್ಮ ತೇಗೂರ, ಸಂಧ್ಯಾ ಅಂಬಡಗಟ್ಟಿ, ಎ.ವಿ. ಉಡುಪಿ, ಜಾವಿದ್ ತೊಲಗಿ,ರಾಜು ಅಷ್ಟೇಕರ, ಮಲ್ಲಪ್ಪ ಗಾಣಿಗೇರ, ನಾಗರಾಜ ಹಂಜಗಿ, ಫಕ್ಕೀರಪ್ಪ ಮೇದಾರ, ಎ.ಎಸ್. ಹಿರೇಮಠ, ಎ.ಜಿ. ಮಟ್ಟಿ ಹಾಗೂ ರವಿ ಪಟ್ಟಣ ಮುಂತಾದವರು ಉಪಸ್ಥಿತರಿದ್ದರು.