ಸಚಿವ ಜಗದೀಶ ಶೆಟ್ಟರ ಅವರ ಹುಟ್ಟು ಹಬ್ಬದ ಅಂಗವಾಗಿ ಹು-ಧಾ ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಎಸ್.ಟಿ ಮೋರ್ಚಾ ವತಿಯಿಂದ ಇತ್ತೀಚಿಗೆ ಹಳೇಹುಬ್ಬಳ್ಳಿಯ ಅಭಿನವನಗರದ ವಿಶ್ವ ಹಿಂದೂ ಪರಿಷತ್ ಸಂಚಾಲಿತ ಗೋ ಶಾಲೆಯಲ್ಲಿ ಗೋ ಮಾತೆ ಪೂಜೆಯೊಂದಿಗೆ ಮೇವು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಭು ನವಲಗುಂದಮಠ, ಮಾರುತಿ ಚಾಕಲಬ್ಬಿ, ವೀರಭದ್ರಪ್ಪ ಹಾಲಹರವಿ, ಶಿವು ಮೇಣಸಿನಕಾಯಿ, ವಿನಯ ಸಜ್ಜನವರ, ಜಗದೀಶ ಬುಳ್ಳನವರ, ಚಂದ್ರಶೇಖರ ಗೋಕಾಕ, ರವಿಂದ್ರ ವೈ, ಸಂತೋಷ ಅರಕೇರಿ, ಬಸವರಾಜ ಅಮ್ಮಿನಬಾವಿ, ಪ್ರೀತಮ ಅರಕೇರಿ, ಪ್ರೀನ್ಸ್ ಶರ್ಮಾ, ಮಂಜುನಾಥ ಕಲಾಲ, ಶಿವಯ್ಯಾ ಹಿರೇಮಠ, ಅಣ್ಣಪ್ಪ ಗೋಕಾಕ ಮತ್ತಿತರರು ಉಪಸ್ಥಿತರಿದ್ದರು.