ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ಕನ್ನಡ ಆದರ್ಶ ದಂಪತಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಮಾಯಣ್ಣ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ಹನಿಯೂರು ಚಂದ್ರೇಗೌಡ, ಗಾಯಕ ಡಾ. ಆರ್. ಗುರುಪ್ರಸಾದ್, ಸಾಹಿತಿ ಗಿರಿಜಾ ಎಸ್. ದೇಶಪಾಂಡೆ, ಪ್ರಸೂತಿ ತಜ್ಞೆ ಡಾ. ರೇಖಾ ರಾಜೇಂದ್ರಕುಮಾರ್, ಮತ್ತಿತರರು ಇದ್ದಾರೆ.