ಮೈಸೂರಿನ ಕನಕ ಸಮುದಾಯ ಭವನದಲ್ಲಿ ಕುರುಬರ ಎಸ್ ಟಿ ಹೋರಾಟ ಸಮಿತಿಯ ಮೀಸಲಾತಿಗಾಗಿ ಮೈಸೂರು ವಿಭಾಗದ ಪೂರ್ವ ಭಾವಿ ಸಭೆಯನ್ನು, ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪ, ಮಾಜಿ ಸಚಿವರಾದ ಎ ಎಚ್ ವಿಶ್ವನಾಥ್, ಶ್ರೀ ಎಚ್ ಎಂ ರೇವಣ್ಣ, ಸಮಿತಿ ಅಧ್ಯಕ್ಷರಾದ. ಶ್ರೀ ಕೆ ವಿರೂಪಾಕ್ಷಪ್ಪ, ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಕೆ ಮುಕುಡಪ್ಪ, ಸಮಿತಿ ಖಜಾಂಚಿಗಳಾದ ಶ್ರೀ ಕೆ ಈ ಕಾಂತೇಶ್,ಕುರುಬರ ಪಾರಂಪರಿಕ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ, ಎಸ್ . ಪುಟ್ಟಸ್ವಾಮಿ, ಟಿ ಬಿ ಬೆಳಗಾವಿ,, ಶಿವಕುಮಾರ್, ಅಣ್ಣೇಗೌಡ, ಕೆ ಬಿ ಶಾಂತಪ್ಪ, ನವೀನ್ ಕುಮಾರ್, ಬಿ ಎಂ ರಘು, ಜೋಗಿ ಮಂಜು, ಮುಂತಾದ ಅನೇಕ ಮುಖಂಡರು ಹಾಜರಿದ್ದರು.