ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ವಿಜಯ್ ಮಹಾಂತೇಶ್ ಅವರು ಲಕ್ಷ್ಮೇಶ್ವರಕ್ಕೆ ಆಗಮಿಸಿದ್ದ ಅವರು ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯವರು ವಿಜಯ್ ಮಹಾಂತೇಶ್ ಅವರಿಗೆ ಶಾಲು ಹೊದಿಸಿ ನೆನಪನ ಕಾಣಿಕೆ ನೀಡಿದರು. ಸೇವಾ ಸಮಿತಿಯ ಸೋಮಣ್ಣ ಮುಳಗುಂದ, ಚಂಬಣ್ಣ ಬಾಳಿಕಾಯಿ, ಬಸವರಾಜ್ ಮೆಣಸಿನಕಾಯಿ, ಮುಖಂಡರುಗಳಾದ ಗಂಗಾಧರ್ ಮೆಣಸಿನಕಾಯಿ, ಪೂರ್ಣಾಜಿ ಕರಾಟೆ, ಫಕಿರೇಶ್ ರಟ್ಟಿಹಳ್ಳಿ, ದುಂಡೇಶ ಕೊಟಗಿ, ಸಂತೋಷ ಜಾವೂರ ಸೇರಿ ಅನೇಕರು ಇದ್ದರು.