ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಬೆಂಕಿಯಿಂದ ಲಕ್ಷಾಂತರ ರೂ ಹಾನಿಗೊಳಗಾದ ರೈತ ಚನ್ನಬಸಪ್ಪ ಹನಿ ಅವರ ಮನೆಗೆ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಬುಧವಾರ ಭೇಟಿ ನೀಡಿ ಧೈರ್ಯ ತುಂಬಿದರು. ಎಪಿಎಂಸಿ ಅಧ್ಯಕ್ಷ ಬಸವರಾಜ ಹೊಸೂರ, ಗುರುನಾಥಗೌಡ ಗೌಡರ, ಬಸವರಾಜ ಭಜಂತ್ರಿ ,ಬಸವರಾಜ ಕೊರವರ ಸೇರಿದಂತೆ ಇನ್ನಿತರರು ಜೊತೆಗಿದ್ದರು.