120 ಲೀಟರ್ ಸೇಂಧಿ ಜಪ್ತಿ: ಇಬ್ಬರ ಬಂಧನ

ವಾಡಿ:ಎ.7: ಪಟ್ಟಣದ ಸೇರಿದಂತೆ ಬಸವನಗುಡಿ, ಬಲರಾಮಚೌಕ್, ಹನುಮಾನ ನಗರ, ವಿಜಯನಗರ ಬಡಾವಣೆಗಳಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ, 120 ಲೀಟರ್ ಸೆಂಧಿ, ಅರ್ಧ ಕೆ.ಜಿ ಸಿ.ಎಚ್ ಪೌಡರ ಜಪ್ತಿ ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆ ಡಿವೈಎಸ್ಪಿ ಕೆ.ಕೆ ರಾಮಪ್ರೀಯ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅಬಕಾರಿ ಸಬ್‍ಇನ್ಸ್‍ಪೇಕ್ಟರ್ ರಮೇಶಕುಮಾರ ಹಾಗೂ ವಾಡಿ ಪಿಎಸ್‍ಐ ವಿಜಯಕುಮಾರ ಬಾವಗಿ, ವಿಶೇಷ ಪೇದೆ ದೊಡ್ಡಪ್ಪ ಪೂಜಾರಿ ಸೇರಿದಂತೆ ಪೇದೆಗಳು ಇದ್ದರು. ಈ ಕುರಿತು ಚಿತ್ತಾಪೂರ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.