120 ಎಕರೆ ಒತ್ತುವರಿ ಅರಣ್ಯ ಇಲಾಖೆ ತೆರವು

ಕೋಲಾರ,ಆ,೨೪:ಪ್ರಭಾವಿತ ವ್ಯಕ್ತಿಗಳು ಸರ್ಕಾರಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ವಶಕ್ಕ ಪಡೆದು ಮಾವಿನ ಗಿಡಗಳನ್ನು ಬೆಳೆಸಿದ್ದ ಸುಮಾರು ೧೨೦ ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ಬುಧವಾರ ಬೆಳಗಿನ ಜಾವ ಸುಮಾರು ೨೦ ಕ್ಕೂ ಹೆಚ್ಚಿನ ಜೆ.ಸಿ.ಬಿ.ಗಳಿಂದ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಹೊರವಲಯದಲ್ಲಿ ದಾಳಿ ಮಾಡಿ ವಶಕ್ಕೆ ಪಡೆದಿರುವ ಕಾರ್ಯಚರಣೆ ನಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ಸುತ್ತಮುತ್ತ ಸುಮಾರು ೩ ಸಾವಿರ ಎಕರೆಗೂ ಅಧಿಕವಾದ ಅರಣ್ಯ ಭೂಮಿ ಪ್ರಭಾವಿತರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಡಿ.ಎಫ್.ಓ. ವೇಡಕೊಂಡಲು ಅವರಿಗೆ ಬಂದ ಖಾಚಿತ ಮಾಹಿತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಸರ್ವೆಕಾರ್ಯ ನಡೆಸಿ ಒತ್ತುವರಿಯನ್ನು ಖಚಿತ ಪಡೆಸಿ ಕೊಂಡ ನಂತರ ಹಂತ,ಹಂತವಾಗಿ ತೆರವು ಕಾರ್ಯಚರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬುದವಾರ ಬೆಳಗಿನ ಜಾವ ೩ ಗಂಟೆಗೆ ೨೦ ಕ್ಕೂ ಹೆಚ್ಚು ಜೆಸಿಬಿಗಳೊಂದಿಗೆ ಹೊಗಳಗೆರೆ ಗ್ರಾಮದ ಹೊರವಲುಯದಲ್ಲಿ ಪೋಲಿಸ್ ಬಂದೋ ಬಸ್ತ್‌ನೊಂದಿಗೆ ಒತ್ತುವರಿ ಪ್ರದೇಶದಲ್ಲಿ ಬೆಳೆಸಲಾಗಿದ್ದ ಮಾವು ಸಪೋಟ ಮರಗಳನ್ನು ತೆರುವು ಮಾಡಲಾಯಿತು.ಇದೇ ಜಾಗದಲ್ಲಿ ನಿರ್ಮಿಸಲಾಗಿದ್ದ ಕೋಳಿ ಫಾರಂ ಸಹ ನಾಶಪಡೆಸಲಾಯಿತು, ಇದು ಮೊದಲ ಹಂತವಾಗಿದ್ದು ನಂತರದಲ್ಲಿ ಅರಣ್ಯ ಭೂಮಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಸಹ ಕ್ರಮ ಜರುಗಿಸಲಾಗುವುದು ಎಂದು ವೇಡ ಕೊಂಡಲು ಎಚ್ಚರಿಸಿದ್ದಾರೆ.
ಡಿ.ವೈ.ಎಸ್.ಪಿ. ನಂದಕುಮಾರ್ ಇಲಾಖೆಯ ಸಿಬ್ಬಂದಿಯೊಂದಿಗೆ ಅರಣ್ಯ ಇಲಾಖೆಗೆ ಸಾಥ್ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.