12 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಕಲಬುರಗಿ,ಜೂ 13: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಅಂತಿಮ ವರ್ಷದ 12 ವಿದ್ಯಾರ್ಥಿಗಳು ವಿವಿಧ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ದೇಶದ ಪ್ರತಿಷ್ಠಿತ ಟಾಟಾ ಕೊಸಾಕಿ ರಿಫ್ಯಾಕ್ಟರಿಸ್ ಲಿಮಿಟೆಡ್ ಕಂಪನಿಗೆ ಸಮೀಉಲ್ ಹಕ್ , ವಾಸವದತ್ತ ಸಿಮೆಂಟ್ ಕಂಪನಿಗೆ ಚಿದಾನಂದ್ ಮತ್ತು ಹಿಂಡವೇರ್ ಕಂಪನಿಗೆ ಶ್ರೀನಿವಾಸ್ ಏಕಬೋಟೆ, ವಿಜ್ಞೇಶ್ ತಮಖಂಡಿ,ಅಭಿನವ ದಶಮ, ಸಂದೇಶ್ ಕುಲಕರ್ಣಿ ,ಗುರುದತ್ ಮುಗುಳಿಕರ್ ,ಗೌತಮ್ ದೇವಾಡಿಗ, ನಿತಿನ್ ಚೌಹಾನ್ ತನ್ಮಯ ಮಣಿಕಂಠ, ಕೃಷ್ಣ ಆರ್ ಎಂ , ನಿತಿನ್ ಪಾಟೀಲ್ ಆಯ್ಕೆಯಾಗಿದ್ದಾರೆ . ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಹೈ ಕ ಶಿ ಸ ಸಂಸ್ಥೆಯ ಅಧ್ಯಕ್ಷ
ಭೀಮಾಶಂಕರ್ ಬಿಲಗುಂದಿ, ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ ,ಕಾರ್ಯದರ್ಶಿಡಾ ಜಗನ್ನಾಥ್ ಬಿಜಾಪುರ , ಡಾ ಮಹದೇವಪ್ಪ ರಾಂಪುರ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ್ ಖಂಡೇರಾವ್,ಸೋಮನಾಥ್ ನಿಗುಡ್ಗಿ, ಡಾ. ಶರಣಬಸಪ್ಪ ಕಾವiರೆಡ್ಡಿ, ವಿನಯ್ ಪಾಟೀಲ್, ಕಾಲೇಜಿನ ಪ್ರಾಚಾರ್ಯ ಡಾ. ಶಶಿಕಾಂತ್ ಆರ್ ಮೀಸೆ ,ಉಪ ಪ್ರಾಚಾರ್ಯ ಡಾ ಕಲ್ಪನಾ ವಾಂಜರಕಡೆ ,ಡಾ ಭಾರತಿ ಹರಸುರ, ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗದ ಅಧಿಕಾರಿ ಡಾ. ಮಾದೇವಪ್ಪ ಗಾದಿಗೆ, ಉಪ ಅಧಿಕಾರಿ ಪೆÇ್ರ. ಅಕ್ಷಯ್ ಅಸ್ಪಲಿ ಡಾ. ನಾಗೇಶ್ ಸಾಲಿಮಠ .ಸೆರಾಮಿಕ್ ಮತ್ತುಸಿಮೆಂಟ್ ವಿಭಾಗದ ಮುಖ್ಯಸ್ಥ ಡಾ ಬಾಬುರಾವ್ ಸೇರಿಕಾರ್ ,ಡಾ.ಅಮರೇಶ್ ಆರ್, ಡಾ. ಎಸ್ ಬಿ ಪಾಟೀಲ್ ,ಡಾ ವೀರೇಶ್‍ಮಲ್ಲಾಪುರ್, ಗುಂಡು ಕೋಳಕೂರ್, ಪೆÇ್ರ ಪವನ್ ರಂಗನಾಳ , ಪೆÇ್ರ ಹಂಸರಾಜ್ ಸಾಹು, ಮಲ್ಲಿಕಾರ್ಜುನ್ ಕುಮಣೆ, ಶರಣು ಜಗತಿ,ಯಲ್ಲಾಲಿಂಗ ಪರಿಟ್ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ