12 ವರ್ಷದ ಬಾಲಕನಿಗೆ ಐಒಎಲ್  ಶಸ್ತ್ರ ಚಿಕಿತ್ಸೆ ಯಶಸ್ವಿ

ಚಿತ್ರದುರ್ಗ. ಮೇ.೨೦; ರಾಷ್ಟ್ರೀಯ ಅಂದತ್ವ ನಿವಾರಣಾ ಕಾರ್ಯಕ್ರಮ  ಹಾಗೂ ಎಬಿಎಆರ್‍ಕೆ ಯೋಜನೆಯಡಿಯಲ್ಲಿ ಹೊಸದುರ್ಗ ತಾಲ್ಲೂಕಿನ 12 ವರ್ಷದ ಬಾಲಕನಿಗೆ ಈಚೆಗೆ ಜಿಲ್ಲಾಸ್ಪತ್ರೆಯಲ್ಲಿ ಐಒಎಲ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಲಾಯಿತು.ಬಾಲಕನಿಗೆ ಈ ಹಿಂದೆ ದೃಷ್ಟಿ ಮಂದಗತಿಯಲ್ಲಿದ್ದು, ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣ ದೃಷ್ಠಿ ಹೊಂದಿದ್ದಾನೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಹೆಚ್. ಬಸವರಾಜಪ್ಪ ತಿಳಿಸಿದ್ದಾರೆ.ಜಿಲ್ಲಾ ನೇತ್ರ ತಜ್ಞ ಡಾ. ಪ್ರದೀಪ್ ಮತ್ತು ತಂಡ ನಿರ್ವಹಿಸಿದ ಈ ಯಶಸ್ವಿ ಐಒಎಲ್ ಶಸ್ತ್ರ ಚಿಕಿತ್ಸೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸ್ಥಾನಿಕ ವೈದ್ಯಾಧಿಕಾರಿಗಳು ಪ್ರಶಂಸೆ  ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಈ ಉಚಿತ ಆರೋಗ್ಯ ಸೇವಾ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ರಾಷ್ಟ್ರೀಯ ಅಂದತ್ವ ನಿವಾರಣಾ ಅಧಿಕಾರಿಗಳು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ನೇತ್ರಾಧಿಕಾರಿಗಳಾದ ರಾಮು, ಕಂಬಣ್ಣ, ನರ್ಸಿಂಗ್ ಅಧಿಕಾರಿ ಪುಷ್ಪ  ಇದ್ದರು.