12 ರಂದು ಸಿಎಂ ಬಿಎಸ್ ವೈ ಪ್ರಚಾರ ಸಭೆ

ಬಸವಕಲ್ಯಾಣ:ಎ.8: ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಪ್ರಿಲ್ 12ರಂದು ನಗರಕ್ಕೆ ಭೇಟಿ ನೀಡುವರು.

ಅಂದು ಬೆಳಿಗ್ಗೆ ಮುದಗಲ್‌ನಿಂದ ಹೆಲಿಕಾಪ್ಟರ್ ಮೂಲಕ ಇಲ್ಲಿನ ಕ್ರೀಡಾಂಗಣಕ್ಕೆ ಬರುವರು. ನಂತರ ಬೆಳಿಗ್ಗೆ 11ಕ್ಕೆ ನಗರದಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 12ಕ್ಕೆ ಗಡಿಗ್ರಾಮ ಲಾಡವಂತಿಯಲ್ಲಿ ನಡೆಯುವ ಬಹಿರಂಗ ಪ್ರಚಾರ ಸಭೆಯಲ್ಲಿ ಮತ್ತು ಮಧ್ಯಾಹ್ನ 2ಕ್ಕೆ ಹಾರಕೂಡ ಹಿರೇಮಠಕ್ಕೆ ಭೇಟಿ ನೀಡುವರು. ಮಧ್ಯಾಹ್ನ 3.45ಕ್ಕೆ ಮುಡಬಿಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು.

ಸಂಜೆ 6ಕ್ಕೆ ಹುಲಸೂರನಲ್ಲಿನ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು. ರಾತ್ರಿ 7.45ಕ್ಕೆ ಬಸವಕಲ್ಯಾಣದಲ್ಲಿನ ಗಣ್ಯರ ಸಭೆಯಲ್ಲಿ ಭಾಗವಹಿಸುವರು. ನಗರದಲ್ಲೇ ವಾಸ್ತವ್ಯ ನಡೆಸಿ, ಏಪ್ರಿಲ್ 13ರಂದು ಬೆಳಿಗ್ಗೆ 9ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.