12 ನೇ ವಾರ್ಡಿನ ಕಾಂಗ್ರೆಸ್ ಟಿಕೆಟ್ ಬಯಸಿದ ಜೆಲ್ಲೆ ಕುಟುಂಬ

ಬಳ್ಳಾರಿ, ಏ.10: ಈ ತಿಂಗಳ 27 ರಂದು ನಡೆಯುವ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ನಗರದ ವಾರ್ಡ್ ಸಂಖ್ಯೆ 12 ರಿಂದ ಜೆಲ್ಲೆ ಮನೆತನದ ನ್ಯಾಯವಾದಿ ಜೆಲ್ಲೆ ಹನುಮಂತಪ್ಪ ಅವರ ಪತ್ನಿ ಮೀನಾಕ್ಷಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈಗಾಗಲೇ ಅವರು ಪಕ್ಷದ ಮುಖಂಡರುಗಳಾದ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ‌ ಸೂರ್ಯನಾರಾಯಣ ರೆಡ್ಡಿ, ಮಾಜಿ ಸಚಿವ ಎಂ.ದಿವಾಕರ ಬಾಬು, ಅನಿಲ್ ಲಾಡ್,ಜೆ.ಎಸ್.ಆಂಜನೇಯಲು ಮೊದಲಾದ ಮುಖಂಡರಿಗೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಇವರು. ನಗರದ ದಲ್ಲಾಳಿ ವ್ಯಾಪಾರಸ್ಥರಾದ ಜೆಲ್ಲೆ ಸಣ್ಣ ಲಕ್ಷ್ಮಣ್ಣ ಅವರ ಹಿರಿಯ ಮೊಮ್ಮಗನ ಪತ್ನಿಯಾಗಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪೂರಕವಾಗಿ ಸದಾ ಬೆಂಬಲವಾಗಿ‌ ನಿಲ್ಲುವ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡ ಬೇಕೆಂದು ಮನವಿ ಮಾಡಿದ್ದಾರೆ.