12 ಜನ ಸಾಧಕರಿಗೆ” ಸಾಹಿತ್ಯ ಸಾರಥಿ” ಪ್ರಶಸ್ತಿ

ಕಲಬುರಗಿ :ಆ.1: ಸಾಹಿತ್ಯ ಸಾರಥಿ ರಾಜ್ಯಮಟ್ಟದ ಸಾಹಿತಿಕ ಪತ್ರಿಕೆಯ 5ನೇ ವರ್ಷದ ಸಂಭ್ರಮದ ಪ್ರಯುಕ್ತ 12 ಜನ ಸಾಧಕರನ್ನು ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಹಾಗೂ ಸಾಹಿತಿ ಬಿ.ಎಚ್ .ನಿರಗುಡಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು
“ಸಾಹಿತ್ಯಕ್ಷೇತ್ರ” ಡಾ ಬಸವರಾಜ ಡೋಣೂರ,ಪ್ರಭಾಕರ ಜೋಶಿ,ಡಾ ಜಯದೇವಿ ಗಾಯಕವಾಡ.
” ಮಾಧ್ಯಮ ಕ್ಷೇತ್ರ ” ಡಾ ಸದಾನಂದ ಪೆರಲಾ, ಹಣಮಂತರಾವ ಹಿರಗೊಂಡಿ, ವೈದ್ಯಕೀಯ ಕ್ಷೇತ್ರ .ಡಾ. ಅಮುಲ್ ಪತಂಗೆ, ರಂಗಭೂಮಿ ಕ್ಷೇತ್ರ ಸಿದ್ದಲಿಂಗಯ್ಯ ಮಲಕೂಡ, , ಶಿಕ್ಷಣ ಕ್ಷೇತ್ರ ಡಾ ಬಿ ಬಿ ಬುಳ್ಳಾ,ಡಾ ಅಶೋಕ ಕುಮಾರ್ ಮಟ್ಟಿ, ಕಲಾ ಕ್ಷೇತ್ರ ರೆಹಮಾನ್ ಪಟೇಲ್,ಗ್ರಂಥಾಲಯ ಕ್ಷೇತ್ರದಲ್ಲಿ ಅಜಯಕುಮಾರ ,ಸಂಗೀತ ಕ್ಷೇತ್ರ ವಿಜಯಲಕ್ಷ್ಮೀ ಕೆಂಗನಾಳ ಮುಂತಾದವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
2022 ಅಗಸ್ಟ್ 9ರಂದು ನಗರದ ರಂಗಾಯಣ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು. ಎಂದು ತಿಳಿಸಿದ್ದಾರೆ.