12 ಕೋಟಿ ಡೋಸ್ ಲಸಿಕೆ ಜೂನ್‌ನಲ್ಲಿ ಲಭ್ಯ

ನವದೆಹಲಿ,.ಮೇ ೩೦- ರಾಷ್ಟ್ರೀಯ ಲಸಿಕಾ ಅಭಿಯಾನದ ಯೋಜನೆಯಡಿ ಜೂನ್ ತಿಂಗಳಲ್ಲಿ ಸರಿ ಸುಮಾರು ೧೨ ಕೋಟಿ ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಒಟ್ಟಾರೆ ೧೨ಕೋಟಿ ಲಸಿಕೆಯಲ್ಲಿ ಶೇಕಡ ೫೦ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಿದ್ದು ಉಳಿದ ಶೇಕಡಾ ೫೦ರಷ್ಟು ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ಔಷಧ ತಯಾರಿಕಾ ಸಂಸ್ಥೆಗಳಿಂದ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿದೆ
ಮೇ.ತಿಂಗಳಲ್ಲಿ ದೇಶದಲ್ಲಿ ಒಟ್ಟಾರೆ ೭,೯೪,೦೫,೨೦೦ ಮಂದಿಗೆ ಲಸಿಕೆ ಲಭ್ಯವಿದೆ ಅದನ್ನು ನಾಳೆ ಮತ್ತು ನಾಡಿದ್ದು ಬಾಕಿ ಇರುವ ಲಸಿಕೆ ವಿತರಣೆ ಮಾಡಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಸರಿ ಸುಮಾರು ೧೨ ಕೋಟಿಗೂ ಅಧಿಕ ಲಸಿಕೆ ದೇಶದಲ್ಲಿ ಲಭ್ಯವಿರಲಿದೆ ಈ ಪೈಕಿ ೬,೦೯,೬೦,೦೦೦ ಡೋಸ್ ಲಸಿಕೆಯನ್ನು ಆದ್ಯತೆ ಮೇರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದೆ.
ಜೊತೆಗೆ ೫, ೮೬,೧೦,೦೦೦ ಡೋಸ್ ಲಸಿಕೆಯನ್ನು ೪೫ ವರ್ಷ ಮೇಲ್ಪಟ್ಟವರು ಮುಂಚೂಣಿ ಕಾರ್ಯಪಡೆಯ ಸಿಬ್ಬಂದಿ ನೀಡಲು ಉದ್ದೇಶಿಸಲಾಗಿದೆ. ಈ ಸಂಖ್ಯೆಯ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ಔಷಧ ತಯಾರಿಕಾ ಸಂಸ್ಥೆಗಳಿಂದ ಖರೀದಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ ಜೂನ್ ತಿಂಗಳಲ್ಲಿ ೧೨ ಕೋಟಿಗೂ ಅಧಿಕ ಲಸಿಕೆ ಲಭ್ಯವಿರಲಿದೆ ಅದನ್ನ ಜನರು ಬಳಸಿಕೊಳ್ಳಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆ ಆಧರಿಸಿ ಆದ್ಯತೆ ಮೇರೆಗೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಪರೀಕ್ಷೆ, ಪತ್ತೆ,ಚಿಕಿತ್ಸೆಗೆ ಸೂಚನೆ

ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ಇನ್ನೂ ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೋಂಕು ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೀಗಿದ್ದರೂ ಸೋಂಕು ಸಂಖ್ಯೆ ಹೆಚ್ಚಾಗುತ್ತದೆ ಇದಕ್ಕೆ ಕಡಿವಾಣ ಹಾಕಲು ಜನರು ಸೂಕ್ತ ವರ್ತನೆ ನಿಯಮ ಪಾಲನೆ ಮಾಡುವಂತೆ ಆಯಾ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು ಇದಕ್ಕಾಗಿ ಕಠಿಣ ನಿಯಮ ಜಾರಿ ಮಾಡುವಂತೆಯೂ ತಿಳಿಸಿದೆ.