12ನೇ ಶತಮಾನದ ಶರಣರ ಬದುಕು ಆದರ್ಶವಾಗಿತ್ತು: ಬಸವರಾಜ ಪಾಟೀಲ ಸೇಡಂ

ಬಸವಕಲ್ಯಾಣ:ಫೆ.10: 12ನೇ ಶತಮಾನದಲ್ಲಿದ ಶರಣರ ಬದುಕು ಆದರ್ಶ ಬದುಕ್ಕಾಗಿತ್ತು. ಅವರ ಹಿತವಚನಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವು ಜೀವನದಲ್ಲಿ ಸಾರ್ಥಕತೆ ಸಾಧಿಸಬೇಕು ಎಂದು ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ರಥ ಮೈದಾನದ ಬಿಕೆಡಿಬಿ ಸಭಾ ಭವನದಲ್ಲಿ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ ಹಾರಕೂಡ ಇವರ ವತಿಯಿಂದ ಹಾಗೂ ಕ್ಷೇತ್ರ ಸಮಿತಿ ಬಸವಕಲ್ಯಾಣ ಇವರ ಸಹಯೋಗದಲ್ಲಿ ದ್ವಿತೀಯ ಕಾಯಕ ಉತ್ಸವ -2024 ಮೊದನೇ ಕಾರ್ಯಕ್ರಮ ಸ್ಥಳೀಯ ಉತ್ಪನಗಳ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ಅವರು ವಿಶ್ವ ಗುರು ಬಸವಣ್ಣನವರಿಗೆ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸಾಂಸ್ಕ್ರತಿಕ ನಾಯಕರು ಎಂದು ಘೋಷಿಸಿದೆ. ಇದರಿಂದ ಬಸವ ಅನುಯಾಯಿಗಳಿಗೆ ಬಹಳ ಸಂತೋಷ ಹಾಗೂ ಹರ್ಷ ವ್ಯಕ್ತವಾಗುತ್ತಿದೆ. ಹಾಗಾಗಿ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಸಾಮಾಜೀಕ ನೆಲೆಯಲ್ಲಿ ಬದುಕುವ ಶಿಕ್ಷಣ ನೀಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅನುಭವ ಮಂಟಪ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಹಾರಕೂಡ ಸಂಸ್ಥಾನ ಹಿರೇಮಠನ ಪೀಠಾಧೀಪತಿಗಳಾದ ಪೂಜ್ಯ ಶ್ರೀ.ಷ.ಬ್ರ.ಡಾ. ಚೆನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಸಂಗಪ್ಪಾ ಬಿ. ಚಿಲ್ಲರಗೆ, ವಿಜ್ಞಾನಿಗಳು ಕೃಷಿ ವಿಸ್ತರಣೆ ಭಾರತೀಯ ಸಿರಿಧಾನ್ಯ ಸಂಶೋಧಾನಾ ಸಂಸ್ಥೆ ಹೈದ್ರಾಬಾದ ರವರು ಉದ್ಘಾಟಿಸಿ ಮಾತನಾಡಿದರು. ಷಟಸ್ಥಲ ಧ್ವಜಾರೋಹಣ ಬಿ.ಕೆ. ಹಿರೇಮಠ ನಿವೃತ್ತ ಉಪಕಾರ್ಯದರ್ಶಿ ಜಿ.ಪಂ. ಬೀದರ ರವರು ನೇರವೇರಿಸಿದರು.
ಬಸವ ಗುರು ಪೂಜೆ ರಾಜಕುಮಾರ ಬಿರಾದಾರ ಸಿರಗಾಪೂರ ಮಾಜಿ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ ರವರು ಮಾಡಿದರು. ವೇದಿಕೆ ಮೇಲೆ ಶಾಸಕ ಶರಣು ಸಲಗರ, ಸಿದ್ದಣ್ಣ ಲಂಗೊಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.