12ನೇ ಶತಮಾನದ ಪಂಚಲಿಂಗ ಸೋಮೇಶ್ವರ ದೇವಾಲಯ ಮರೆತ ಸರಕಾರ

ಸವಣೂರ, ಮೇ3: ಪ್ರಸಿದ್ಧ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಕಾರಡಗಿ ವೀರಭದ್ರೇಶ್ವರ ದೇವಸ್ಥಾನ ಬಳಿಯಿರುವ ಪಂಚ ಲಿಂಗ ಸೋಮೇಶ್ವರ ದೇವಾಲಯವನ್ನು ಜಿರ್ಣೋದ್ಧಾರ ಮಾಡದೇ ಸರಕಾರ ಚಡಪಡಿಸುತ್ತಿದೆ.
ಸವಣೂರ ತಾಲೂಕಿನ ಕಾರಡಗಿ ವೀರಭದೇಶ್ವರ ದೇವಸ್ಥಾನ ಬಳಿರುವ ಪಂಚ ಲಿಂಗ ಸೋಮೇಶ್ವರ ದೇವಾಲಯವು 7 ಅಡಿ ಅಳದಲ್ಲಿದ್ದು. ಮಳೆ ನೀರು ಸಂಗ್ರಹಣೆಯಿಂದ ಪಂಚ ಲಿಂಗ ಸೋಮೇಶ್ವರ ದೇವಾಲಯ ಮುಳುಗಿದೆ. ಅಲ್ಲದೇ ಕಸ, ಕಡ್ಡಿ, ಧೂಳು, ಹುಲ್ಲು ಬೆಳೆದು ಆವರಿಸಿಕೊಂಡಿದ್ದು. ಸುಮಾರು 12ನೇ ಶತಮಾನದ ಹಿಂದೆ ಕಲ್ಯಾಣ ಚಾಲುಕ್ಯರ ಕಾಲದ ಜಕಣಾಚಾರಿ ಶಿಲ್ಪಿಯಿಂದ ಕೆತ್ತಲಾದ ಪಂಚ ಲಿಂಗ ಸೋಮೇಶ್ವರ ದೇವಾಲಯವು ಸುಮಾರ 25 ಕಿ.ಮೀ ದೂರದವರಿಗೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯಕ್ಕೆ ಹೋಗುವ ಸುರಂಗ ಮಾರ್ಗವಾಗಿ ಭೂಮಿಯೊಳಗೆ ಕಲ್ಲಿನ ರಹದಾರಿ ಇದೆ ಎಂಬುದು ಕಾರಡಗಿ ಗ್ರಾಮಸ್ಥರ ನಂಬಿಕೆ. ಪಂಚ ಲಿಂಗ ಸೋಮೇಶ್ವರ ದೇವಾಲಯವು 7 ಅಡಿ ಅಳದಲ್ಲಿ ಭೂಮಿಯಲ್ಲಿದೆ. ಮಳೆ ನೀರು ಸಂಗ್ರಹವಾಗಿ ದೇವಾಲಯ ಸಂಪೂರ್ಣ ಹಾಳಾಗಿದೆ. ಸೋಮೇಶ್ವರ ದೇವಾಲಯವನ್ನು ಸರಕಾರ ಸಂಪೂರ್ಣ ಮರೆತು ಬಿಟ್ಟಿದ್ದೆ ಎಂಬುದು ಭಕ್ತರ ಆರೋಪವಾಗಿದೆ.
ಸರಕಾರಕ್ಕೆ ಹಲವು ಬಾರಿ ಜಿರ್ಣೋಧಾರ ಮಾಡುವಂತೆ ಮುಜರಾಯಿ, ದತ್ತಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕಾರಡಗಿ ಗ್ರಾಮಸ್ಥರು. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಪ್ರಸಿದ್ಧ 12ನೇ ಶತಮಾನದ ಕಾಲದ ಪಂಚ ಲಿಂಗ ಸೋಮೇಶ್ವರ ದೇವಾಲಯವನ್ನು ರಕ್ಷಿಸಬೇಕು. ಜೀರ್ಣೋದ್ಧಾರ ಮಾಡಬೇಕು ಎಂಬುದು ಗ್ರಾಮಸ್ಥರು ಮತ್ತು ಭಕ್ತರ ಬೇಡಿಕೆಯಾಗಿದೆ.