12ನೇ ಶತಮಾನದಲ್ಲಿ ಶರಣರು ವಚನಗಳ ಮೂಲಕ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ್ದರು:ಶಾಸಕ ರಹೀಮ ಖಾನ್

ಬೀದರ ಜ. 19: 12ನೇ ಶತಮಾನದ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ತುಂಬಿರುವ ಅಜ್ಞಾನ, ಮೂಡನಂಬಿಕೆ ಹೋಗಲಾಡಿಸಿ ಸಮಾನತೆಗಾಗಿ ಶ್ರಮಿಸಿದ ಮಹಾಶರಣರಲ್ಲಿ ಸೊಲ್ಲಾಪುರದ ಕಾಯಕಯೋಗಿ ಸಿದ್ದರಾಮೇಶ್ವರರು ಒಬ್ಬರಾಗಿದ್ದಾರೆ ಎಂದು ಬೀದರ ಶಾಸಕರಾದ ರಹೀಮ ಖಾನ್ ಹೇಳಿದರು.

ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮೇಶ್ವರರು ಸೋಲಾಪೂರದಲ್ಲಿ ಅನೇಕ ಗುಡಿ ಗುಂಡಾರಗಳು, ಕೆರೆ ಕಟ್ಟೆ ನಿರ್ಮಾಣ ಮಾಡಿ ಪಶು ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲತೆ ಮತ್ತು ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನ ಸಿಗುವಲ್ಲಿ ಇವರ ಪಾತ್ರ ಬಹಳ ದೊಡ್ಡದು, ಸಿದ್ದರಾಮೇಶ್ವರರು ಸಾವಿರಾರು ವಚನಗಳ ಮೂಲಕ ಶರಣ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವುದರಿಂದ ಇವರ ನಡೆ ನುಡಿ ಸಂದೇಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಭೋವಿ ಸಮಾಜದವರು ತುಂಬಾ ಶ್ರಮಜೀವಿಗಳು ಮತ್ತು ಕಾಯಕ ಯೋಗಿಗಳಾಗಿದ್ದು, ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ತಮ್ಮ ಅಭಿವೃದ್ಧಿ ಕೆಲಸಗಳು ಮಾಡಲು ಸದಾ ತಮ್ಮ ಜೊತೆಗೆ ಇರುತ್ತೇನೆಂದು ಹೇಳಿದರು.

ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದ ಬೀದರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ವಿ.ಕಾಮಣ್ಣಾ ಮಾತನಾಡಿ, 12ನೇ ಶತಮಾನದಲ್ಲಿ ಸೊನ್ನಲಗಿ (ಸೋಲಾಪೂರ) ದಲ್ಲಿ ಜನಿಸಿ ಶ್ರೀಶೈಲ್ ಮಲ್ಲಿಕಾರ್ಜುನ ಸಾಕ್ಷತ ದರ್ಶನ ಪಡೆದ ಸಿದ್ದರಾಮೇಶ್ವರರು ಅನೇಕ ಅಬಿವೃದ್ಧಿ ಕೆಲಸ ಮಾಡಿ ಜನ ಪ್ರಸಿದ್ದರಾಗಿದ್ದಾರೆ. ಅಲ್ಲಪ್ರಭುರೊಂದಿಗೆ ಸೋಲಾಪೂರದಿಂದ ಬಸವಕಲ್ಯಾಣ ಅನುಭವಕ್ಕೆ ಬಂದು ವಿಶ್ವ ಗುರು ಬಸವಣ್ಣನವರ ಜೊತೆಗಿದ್ದು 68 ಸಾವಿರ ವಚನಗಳು ರಚಿಸಿದ್ದಾರೆ ಮತ್ತು ಅನುಭವ ಮಂಟಪ ಸೂನ್ಯ ಪೀಠದ ಮೂರನೇ ಅಧ್ಯಕ್ಷರಾಗಿ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ ಅಣ್ಣಾರಾವ ಪಾಟೀಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಗೌತಮ ಅರಳಿ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಮಾಣಿಕರಾವ ವಾಡೇಕರ್, ತಾಲೂಕಾ ಭೋವಿ ಸಮಾಜದ ಅಧ್ಯಕ್ಷ ಪುಂಡಲೀಕ ನಿಂಗದಳ್ಳಿ, ತುಕಾರಾಮ ಮಳಚಾಪೂರ, ಮಾರುತಿ ಭೋವಿ, ಗಣೇಶ ಭೋವಿ, ಲಕ್ಷ್ಮಣ ಘಾಟಬೋರಳ, ರಾಜು ಮಕಳೋರ್, ಅಶೋಕ ರಾಜಗಿರಿ, ಸಂಜು ವಾಡೇಕರ್, ರಾಮುಲು ನಿಜಾಮಪೂರ, ಅಶೋಕ ಮನ್ನಾಏಖೇಳ್ಳಿ, ಅಶೋಕ ಗಡವಂತಿ, ವಿಜಯಕುಮಾರ ವಾಡೇಕರ್ ಸೇರಿದಂತೆ ಭೋವಿ ಸಮಾಜದವರು ಉಪಸ್ಥಿತರಿದ್ದರು.