
ಸಂಜೆವಾಣಿ ವಾರ್ತೆ
ಕುರುಗೋಡು:ಏ.14: ತಾಲೂಕು ಸಮೀಪದ ಕುಡಿತಿನಿ ಪಟ್ಟಣದ ಅನಿರ್ದಿಷ್ಟಾವಧಿ ಧರಣಿ ನಿರತರ ಸ್ಥಳದಲ್ಲಿ ಭೂ ಸಂತ್ರಸ್ಥರು, ವಿವಿಧ ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಯಿತು.
ನಮ್ಮ ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ ಮಾತನಾಡಿ, ಭಾರತವು ಮಹಾತ್ಮರು, ದಾರ್ಶನಿಕರು, ತತ್ವಜ್ಞಾನಿಗಳ ದೇಶವಾಗಿದೆ. ಇವರಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಹ ಒಬ್ಬರು. ಅವರು ಸಂವಿಧಾನ ಬರೆಯುವ ಮೂಲಕ ಸಮಾನತೆ ಸಾರಿದ ಮಹಾನ್ ನಾಯಕರಾಗಿದ್ದಾರೆ. ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂದರು.
ರೈತರಿಂದ ವಿವಿಧ ಕನ್ನಡಪರ ಸಂಘಟನೆಗಳಿಂದ 118ನೇ ದಿನಕ್ಕೆ ಅನಿರ್ದಿಷ್ಟಾವಧಿ ಧರಣಿ ತಲುಪಿದೆ ಮಿತ್ತಲ್, ಉತ್ತಮ್ ಗಾಲ್ವಾ ಹಾಗೂ ಎನ್.ಎಂ.ಡಿ.ಸಿ ಪಂಕನಿಗಳಿಗೆ ವಶಪಡಿಸಿಕೊಂಡ 12500 ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಇಲ್ಲಿಯವರೆಗೆ ಕಾರ್ಖಾನೆಗಳನ್ನು ಸ್ಥಾಪಿಸಿದೇ, ಉದ್ಯೋಗ ನೀಡದೇ, 13 ವರ್ಷ ಕಳೆದಿದೆ, ಕೂಡಲೇ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ನಮ್ಮ ಜಮೀನುಗಳನ್ನು ನಮಗೆ ವಾಪಸ್ಸು ನೀಡಿ ಎಂದರು.
ಈಗಾಗಲೇ ನೀತಿಸಂಹಿತೆ ಜಾರಿಯಾಗಿದೆ ರಾಜ್ಯಪಾಲರು ಮಧ್ಯ ಪ್ರವೇಶಿಸಿ KIADBಯ ಮುಖ್ಯಕಾರ್ಯದರ್ಶಿ ಹಾಗೂ ಕಂಪನಿಯವರನ್ನು ಒಳಗೊಂಡ ಸಭೆ ನಡೆಸಿ ರೈತರ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಭೂಮಿಯಲ್ಲಿ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಭೂಮಿ ರೈತರಿಗೆ ವಾಪಸ್ಸು ನೀಡಲು ಕ್ರಮಜರುಗುಸಿ ಎಂದರು.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುಂದುವರೆದ ಧರಣಿ ಮತ್ತು ಅಂಬೇಡ್ಕರ್ ಜಯಂತಿಯನ್ನು ನೀತಿ ಸಂಹಿತೆಯ ಚೌಕಟ್ಟಿನಲ್ಲಿ ನಿರ್ವಹಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕುಡಿತಿನಿ ಪಟ್ಟಣದ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಕನ್ನಡ ಪರ ಸಂಘಟನೆಯವರು ಉಪಸ್ಥಿತರಿದ್ದರು.