117ನೇ ಶ್ರೀ ಬೀರೇಶ್ವರ ಕೋ- ಆಫ್ ಕ್ರೆಡಿಟ್ ಬ್ಯಾಂಕ್ ಶಾಖೆ ಉದ್ಘಾಟನೆ


ಸಂಜೆವಾಣಿ ವಾರ್ತೆ
ಗಂಗಾವತಿ, ಅ.09: ನಗರದ ಗಾಂಧಿ ಚೌಕ್ ನಲ್ಲಿ ಇರುವ ಶಿವರಾಮ ರಾಯ್ಕರ ಅವರ ಕಾಂಪ್ಲೆಕ್ಸ್ ನಲ್ಲಿ 117 ನೇ ನೂತನವಾಗಿ  ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಬ್ಯಾಂಕ್ ಸಂಸ್ಥಾಪಕರಾದ ಅಣ್ಣಾಸಾಹೇಬ ಶಂಕರ್ ಜೊಲ್ಲೆ ಇವರ ಜನ್ಮದಿನದ ಪ್ರಯುಕ್ತ 177 ನೇ ನೂತನ ಶಾಖೆಯನ್ನು ಉದ್ಘಾಟಿಸಲಾಯಿತು.
ನಂತರ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಕರ್ನಾಟಕ ಮಹಾರಾಷ್ಟ್ರ ಗೋವಾ ರಾಜ್ಯದಲ್ಲಿ  ಈ ಒಂದು ಬ್ಯಾಂಕ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಬಡವರಿಗೆ ಹಾಗೂ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಮೂಲಕ ಗ್ರಾಹಕರಿಗೆ ಒಳ್ಳೆಯ ಕೆಲಸವನ್ನು ಮಾಡಲಕ್ಕೆ ಸಹಾಯ ಆಗಿದೆ. ಮತ್ತು ಈ ಒಂದು ಶಾಖೆಗಳಲ್ಲಿ ಸುಮಾರು 3.60 ಲಕ್ಷ ಸದಸ್ಯರು ಇದ್ದಾರೆ ಹಾಗೂ ಆಕರ್ಷಕ ಠೇವುಣಿ, ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ ವಿಧವೆಯರಿಗೆ ಹಾಗೂ ವಿಕಲಚೇತನರಿಗೆ ಮತ್ತು ಮಾಜಿ  ಸೈನಿಕರಿಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಕೊಡುತ್ತಾರೆ ಆದ ಕಾರಣ ಗಂಗಾವತಿ ಕನಕಗಿರಿ ಕಾರಟಗಿ ಭಾಗದ ಸಾರ್ವಜನಿಕರು ಸದುಪಯೋಗ ಪಡಿದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.
ನಂತರ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳ ಶ್ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಬೀರೇಶ್ವರ ಕೋ ಆಫ್ ಸಂಸ್ಥೆಯವರು ಗಂಗಾವತಿ ಸಂಘದ ಸದಸ್ಯರು ಠೇವಣಿದಾರರು ಮತ್ತು ಹಿತೈಷಿಗಳ ಸಹಕಾರದಿಂದ ಎಲ್ಲಾ ಗ್ರಾಹಕರಿಗೆ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಗಂಗಾವತಿ ನಗರದಲ್ಲಿ ನೂತನ ಶಾಖೆಯ ಕಾರ್ಯಾಲಯ ಪ್ರಾರಂಭವಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಸ್ಕೋರಿ ಗಿರೀಯಪ್ಪ,ಮುಸ್ಟೋರು ವಿರೂಪಾಕ್ಷಪ್ಪ,ವಿಜಯಕುಮಾರ್ ರಾಯ್ಕರ,ಸುಬ್ರಮಣ್ಯ ರಾಯ್ಕರ್,ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಟಿ ಲಿ ವ್ಯವಸ್ಥಾಪಕರಾದ ಬಸವರಾಜ, ಸಮೀರ್, ರಮೇಶ,ಬಸವರಾಜ ಪಿ.ವಿ.ಮುಖಂಡರಾದ ಮಂಜುನಾಥ ಮಸ್ಕಿ,ಭರತ್ ಶಾಸ್ತ್ರ, ಚಂದ್ರಶೇಖರ ಅಕ್ಕಿ ಸೇರಿದಂತೆ ಇತರರು ಇದ್ದರು.