ಶಿಕಾರಿಪುರಕ್ಕೆ ನೀರು ಒಯ್ಯುವ ಉಡುಗಣಿ ತಾಳಗುಂದ ಹೊಸುರು ಏತ ನೀರಾವರಿ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೋಳ್ಳುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡು ಅಸ್ವಸ್ಥರಾದ ವಕೀಲರು, ಹೋರಾಟಗಾರರಾದ ಬಿ.ಡಿ.ಹೀರೆಮಠ ರವರನ್ನು ಇಂದು ಮಾಜಿ ಸಂಸದ ಐ.ಜಿ. ಸನದಿ ಕಿಮ್ಸ್‍ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಬೇಡ ಜಂಗಮ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷರು ಕಾಂಗ್ರೆಸ್ ಮುಖಂಡರಾದ ನಿರಂಜನ ಹೀರೆಮಠ, ವೀರಣ್ಣ ಹೀರೆಹಾಳ, ವಾದಿರಾಜ ಕುಲಕರ್ಣಿ, ಷಣ್ಮುಖಯ್ಯ ಪಂಚಾಂಗಮಠ ಮುಂತಾದವರು ಉಪಸ್ಥಿತರಿದ್ದರು.