1,15 ಲಕ್ಷ ಕೋಟಿ ಆದಾಯ ತೆರಿಗೆ ಹಣ ಮರು ಪಾವತಿ

ನವದೆಹಲಿ, ನ.10- ದೇಶದಲ್ಲಿ ಪ್ರಸಕ್ತ ವರ್ಷ 1,15,917 ಕೋಟಿ ರೂಪಾಯಿ ಆದಾಯ ತೆರಿಗೆ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

2021ರ ಏಪ್ರಿಲ್ 1 ರಿಂದ ನವೆಂಬರ್ 8 ರ ವರೆಗೆ 98.90 ಲಕ್ಷ ತೆರಿಗೆ ಪಾವತಿದಾರರಿಗೆ ಮರು ಪಾವತಿ ಮಾಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.

97,12,911 ಪ್ರಕರಣಗಳಲ್ಲಿ 34 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ.1,77,184 ಪ್ರಕರಣಗಳಲ್ಲಿ 79,917 ಕೋಟಿ ರೂಪಾಯಿ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಿರುವುದಾಗಿ ಆದಾಯ ತೆರಿಗೆ ತಿಳಿಸಿದೆ.

2021-22 ರಲ್ಲಿ 65.31 ಲಕ್ಷ ಮರು ಪಾವತಿ‌ ಸೇರಿದಂತೆ 12,616.79 ಕೋಟಿ ಆದಾಯ ತೆರಿಗೆ ಹಣವನ್ನು ಮರುಪಾವತಿ ಮಾಡಲಾಗದೆ ಎಂದು ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

2021 -22 ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದವರ ಪರಿಶೀಲನೆ ನಡೆಸಿ ಅದರಲ್ಲಿ 1,15 ಲಕ್ಷ ಕೋಟಿಗೂ ಅಧಿಕ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ತೆರಿಗೆ ಪಾವತಿದಾರರಿಗೆ ರಿಟರ್ನ್ಸ ಪರಿಶೀಲನೆ ಬಳಿಕ ಮರು ಪಾವತಿ ಮಾಡುವುದಾಗಿಯೂ ಇಲಾಖೆ ತಿಳಿಸಿದೆ