114ನೇ ದಿ.ಡಾ.ಬಾಬು ಜಗಜ್ಜೀವನರಾಂ ಜನ್ಮದಿನೋತ್ಸವ

ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಚಿವರಿಂದ ಗೌರವ ಸಮಪಣೆ
ಮೈಸೂರು, ಏ.5: ಮೈಸೂರು ರೈಲ್ವೆ ನಿಲ್ದಾಣದ ಬಳಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಉಪಪ್ರಧಾನಿ ದಿ.ಡಾ.ಬಾಬು ಜಗಜ್ಜೀವನರಾಂ ಅವರ 114ನೇ ಜನ್ಮದಿನೋತ್ಸವವನ್ನು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು ಹಸಿರು ಕ್ರಾಂತಿಯ ಹರಿಕಾರ, ಭಾರತದ ಉಪಪ್ರಧಾನಿ ದಿ.ಡಾ.ಬಾಬು ಜಗಜ್ಜೀವನರಾಂ ಅವರ 114ನೇ ಜನ್ಮದಿನೋತ್ಸವವನ್ನು ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸುತ್ತಿದ್ದೇವೆ ಎಂದರು.
ಮೈಸೂರಿನಲ್ಲಿ ಕೊರೋನಾ ಜಾಸ್ತಿ ಆಗುತ್ತಿರುವ ಕುರಿತು ಪ್ರತಿಕ್ರಿಯಿಸಿ ಸಭೆ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದೆಲ್ಲವನ್ನು ಮಾಡಿದ್ದಾರೆ. ಏನೆಲ್ಲ ಕೋವಿಡ್ ಗೆ ನಿಯಮ ಹಾಕಿದ್ದಾರೆ ಅದೆಲ್ಲವನ್ನೂ ಕೂಡ ಅನುಸರಿಸಿದ್ದೇವೆ. 45ಸಾವಿರ ಇದ್ದ ಕೋವಿಡ್ ನ್ನು ಕಡಿಮೆ ಮಾಡುವ ಕಾರ್ಯ ಕೂಡ ಮೈಸೂರು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿತ್ತು. ವಿಶೇಷವಾಗಿ ಜಿಲ್ಲಾಧಿಕಾರಿಗಳು ಪೆÇಲೀಸ್ ಕಮೀಷನರ್, ಎಸ್ಪಿಯವರು ಏನು ನಿಯಮ ಇದೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಬಳಿಕ ಕಡಿಮೆ ಆಗಿದೆ. ಈಗ ಸ್ವಲ್ಪ ಜಾಸ್ತಿ ಆಗುತ್ತಿದೆ. ಕಟ್ಟುನಿಟ್ಟಿನ ಕ್ರಮ ಏನು ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದರು.
ಊಟಿ ಚುನಾವಣಾ ಪ್ರಚಾರ ಕುರಿತು ಪ್ರತಿಕ್ರಿಯಿಸಿ ಊಟಿಯಲ್ಲಿ ಭೋಜರಾಜನ್ 15-20ಸಾವಿರ ಅಂತರದಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತಾರೆ. ಊಟಿಯಲ್ಲಿರುವ ಕನ್ನಡಿಗರು ಕೂಡ ಅಲ್ಲಿನ ಅಭಿವೃದ್ಧಿಯ ಕುರಿತಾಗಿಯೇ ಮಾತನಾಡುತ್ತಾರೆ. ತಿಳಿದವರಿದ್ದಾರೆ ಎಂದರು.
ಅಸೆಂಬ್ಲಿ ನಡೆಯುವಾಗ ಜನರ ಸಮಸ್ಯೆ ಹೇಳುವ ಕಾರ್ಯ ಮಾಡಿಲ್ಲ. ಬರಿ ಸಿಡಿ ನೆಪ ಇಟ್ಟುಕೊಂಡು ತಗಾದೆ ತೆಗೆದರು, ಇವರೇ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮೇಟಿಯವರದ್ದು ಬಂತು, ಮೇಟಿಯವರಿಗೆ ಏನು ಕ್ರಮ ತಗೊಂಡರು. ಅಸೆಂಬ್ಲಿಯನ್ನು ಕರ್ನಾಟಕದ 5ಕೋಟಿ ಜನ ನೋಡುತ್ತಿರುತ್ತಾರೆ. ಏನಾಗತ್ತೆ, ಯಾರ ಕಷ್ಟಸುಖಗಳಿಗೆ ಸ್ಪಂದನೆಯಾಗತ್ತೆ ಒಂದು ದಿವಸ ಕೂಡ ಸಮಸ್ಯೆ ಕುರಿತು ಮಾತಾಡಿಲ್ಲ, ಬರೇ ಸ್ಟ್ರೈಕ್ ಮಾಡಿಕೊಂಡೇ ಹೋದರು.
ಎಸ್ ಐಟಿಯಲ್ಲಿ ಪವರ್ ಪುಲ್ ಅಧಿಕಾರಿಗಳಿದ್ದಾರೆ. ಗೃಹಮಂತ್ರಿಗಳಾಗಲಿ, ಸಿಎಂ ಆಗಲಿ ಯಾರೂ ಕೂಡ ಹಸ್ತಕ್ಷೇಪ ಮಾಡಲು ಅವಕಾಶ ನೀಡಿಲ್ಲ. ಎಸ್ ಐಟಿಯವರು ಸಮರ್ಥವಾಗಿ ಇದ್ದಾರೆ. ಯಾರನ್ನೂ ಯಾವ ಮಾತನ್ನೂ ಕೇಳದೇ ಇರತಕ್ಕಂತಹ ಅಧಿಕಾರಿಗಳು ಇದ್ದಾರೆ. ತನಿಖೆ ಆಗತ್ತೆ, ಬಳಿಕ ಸತ್ಯಾಂಶ ಹೊರಬರಲಿದೆ. ನಮಗೆ 9,10,11,12, ಬೆಳಗಾಂ, ಮಸ್ಕಿ, ಬಸವಕಲ್ಯಾಣ ಕಡೆ ಹಾಕಿದ್ದಾರೆ. 8ನೇ ತಾರೀಖಿನಿಂದ ಆ ಕಡೆ ಪ್ರವಾಸ ಕೈಗೊಂಡಿದ್ದೇನೆ ಎಂದರು.