114ನೇ ಜನ್ಮದಿನಾಚರಣೆ ಸರಳವಾಗಿ ಆಚರಣೆ

ನಂಜನಗೂಡು. ಏ.05: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಾ ಬಾಬು ಜಗಜೀವನರಾಮ್ 114 ನೇ ಜನ್ಮದಿನಾಚರಣೆ ಸರಳವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಶಾಸಕ ಹರ್ಷವರ್ಧನ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ನಂಜನಗೂಡು ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ, ನಗರಸಭೆ ಆಯುಕ್ತ ಕರಿಬಸವಯ್ಯ, ನಗರಸಭೆ ಅಧ್ಯಕ್ಷ ಮಹಾದೇವಸ್ವಾಮಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಾದೇವಪ್ಪ , ಮುಖ್ಯ ಭಾಷಣಕಾರರಾಗಿ ಶಿವಮೂರ್ತಿ ಹಾಗೂ ಉಪಾಧ್ಯಕ್ಷ ನಾಗಮಣಿ ನಗರಸಭೆ ಸದಸ್ಯರಾದ ಗಾಯತ್ರಿ ಇತರ ಸದಸ್ಯರು ಅಧಿಕಾರಿಗಳು ಇದ್ದರು.