112 ಕರೆ ಜಾಗೃತಿ ಮೂಡಿಸಲು ಮುಂದಾದ ಕೊಟ್ಟೂರು ಪೊಲೀಸರು

ಕೊಟ್ಟೂರು ಮೇ 3: ಕೇಂದ್ರ ಸರ್ಕಾರದ ‘ಒಂದು ದೇಶ; ಒಂದು ತುರ್ತು ಪೊಲೀಸ್‌ ಸಂಖ್ಯೆ’ ಯೋಜನೆಯಡಿ ಒದಗಿಸಲಾಗಿರುವ ಇಆರ್‌ಎಸ್‌ಎಸ್ ‌(Emergency Response Support System) ಪೊಲೀಸ್‌ ವಾಹನ ಆರಂಭ ವಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಜಾಗೃತಿ ಮೂಡಿಸಲು ಕೊಟ್ಟೂರು ಪೊಲೀಸರು ಮುಂದಾಗಿದ್ದಾರೆ.
ಅಪಘಾತ, ದರೋಡೆ, ಕಳವು, ಗಲಾಟೆಗಳು ನಡೆದಾಗ ಸಾರ್ವಜನಿಕರು 112 ನಂಬರ್‌ಗೆ ಕರೆ ಮಾಡಿದರೆ ಕೇವಲ 15 ನಿಮಿಷಗಳ ಒಳಗಾಗಿ ಸ್ಥಳಕ್ಕೆ ಇಆರ್‌ಎಸ್‌ಎಸ್‌ ವಾಹನದ ಮೂಲಕ ಪೊಲೀಸರು ಬರಲಿದ್ದಾರೆ ಈ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ.ಸಿಪಿಐ ದೊಡ್ಡಣ್ಣ ಪಿಎಸ್ಐ ನಾಗಪ್ಪ ಸಿಬ್ಬಂದಿಗಳಾದ ಕಂದಗಲ್ ಕೊಟ್ರಗೌಡ ಹೊಸ ಕೊಡಿಹಳ್ಳಿರಮೇಶ ಹ್ಯಾಳ್ಯರಾಜೇಂದ್ರ ಸೇರಿದಂತೆ ಅನೇಕ ಸಿಬ್ಬಂದಿ ಇದ್ದರು.