110 ಮಂದಿಗೆ ವ್ಯಾಕ್ಸಿನ್

ಕಲಬುರಗಿ:ಮೇ.28: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 13ರ ನ್ಯೂ ರಹಿಮತ್ ನಗರ ಬಡಾವಣೆಯ ಪ್ರಥಮಿಕ ಅರೋಗ್ಯ ಕೇಂದ್ರದಲ್ಲಿ ಶಾಸಕಿ ಕನೀಜ್ ಫಾತೀಮಾ ಅವರ ಪುತ್ರ, ಖಮರ್ ಉಲ್ ಇಸ್ಲಾಂ ಫೌಂಡೇಶನ್ ಅಧ್ಯಕ್ಷ, ಯುವ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಅವರ ಸಮ್ಮುಖದಲ್ಲಿ 110 ಮಂದಿಗೆ ಕೋವಿಡ್ ಶಿಲ್ಡ್ ವ್ಯಾಕ್ಸಿನ್ ಹಾಕಲಾಯಿತು.

ಈ ವೇಳೆ ಫರಾಜ್ ಉಲ್ ಇಸ್ಲಾಂ ಮಾತನಾಡಿ, ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್ ಅವರು ಬಡಾವಣೆಯ ಸಮಸ್ಯೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ವಾರ್ಡ್ ನಲ್ಲಿ ಸಕ್ರಿಯವಾಗಿ ತಿಡಗಿದ್ದಾರೆ. ಅಲ್ಲದೇ ಮೂರುದಿನಗಳಲ್ಲಿ 300 ಮಂದಿಗೆ ವ್ಯಾಕ್ಸಿನ್ ಸಹಕಾರ ನೀಡಿಎಉವ ಕಾರ್ಯಾ ಶ್ಲಾಘನೀಯ ಎಂದು ಅಭಿನಂದನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಫರಾಜ್ ಉಲ್ ಇಸ್ಲಾಂ ಮತ್ತು ನೂರ್ ಉಲ್ ಇಸ್ಲಾಂ ಅವರ ಅಪ್ತರರಾದ ಶೊಹೇಬ್ ಪಟೇಲ್, ಇಬ್ರಾಹಿಮ್ ಖತೀಬ್, ಶೇಕ್ ಸಮೀರ್, ಶೊಹೇಬ್ ಮೊಹ್ಮದ್, ಬಲಿಕೊದ್ದೀನ್ ರೀಜ್ವಾನ್, ಶೊಹೇಬ್ ಹಸನ್, ಕಾರ್ಯದರ್ಶಿ ಮೊಹ್ಮದ್ ಅಜಹರ್, ಸಾದೀಕ್ ಅಲಿ ಫಾತೇಖಾನಿ, ಯುವ ಜಾಗೃತಿ ವೇದಿಕೆ ಕಾರ್ಯದರ್ಶಿ ಸಾಜಿದ್ ಅಲಿ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು‌.