11 ವಾರ್ಡಿನ ಮತದಾರರೇ ನಿಮ್ಮ ಸೇವೆಗೆ ಅವಕಾಶ ನೀಡಿ : ಗೋವಿಂದರಾಜುಲು.

ಬಳ್ಳಾರಿ:ಏ.26- ನಗರದ ಸಣ್ಣ ಮಾರ್ಕೆಟ್ , ಗ್ರಹಂ ರಸ್ತೆ , ಕಮಿಂಗ್ ರೋಡ್ ಮುಂತಾದ ಪ್ರದೇಶಗಳನ್ನು ಹೊಂದಿರುವ 11 ನೇ ವಾರ್ಡಿನ ಮತದಾರರೇ ನಿಮ್ಮ ಸೇವೆಗೆ ನನಗೊಂದು ಅವಕಾಶಕೊಡಿ. ನಗರದಲ್ಲಿಯೇ ಈ ವಾರ್ಡನ್ನು ಮಾದರಿ‌ ವಾರ್ಡಾಗಿ ಅಭಿವೃದ್ಧಿ ಪಡಿಸಲು ನಾನು ಬದ್ದನಾಗಿರುವುದಾಗಿ ಈ ವಾರ್ಡಿನ ಬಿಜೆಪಿ ಅಭ್ಯರ್ಥಿ ಗೋವಿಂದರಾಜುಲು ಇಂದು ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಅಂತಿಮವಾಗಿ ಮತದಾರರಲ್ಲಿ ಮನವಿ ಮಾಡಿದ್ದು ಕಂಡು ಬಂತು.
ಈ ಸಂದರ್ಭದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಈ ಹಿಂದೆ ನಮ್ಮ ತಂದೆ ಎಗ್ ಕುಮಾರಸ್ವಾಮಿ ಅವರು ಈ ಹಿಂದೆ ಕೌನ್ಸಿಲರ್ ಆಗಿ ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅಷ್ಟೇ ಅಲ್ಲದೆ ಶಾಸಕರ, ಸಚಿವರ ಬೆಂಬಲದೊಂದಿಗೆ ವಾರ್ಡಿನ ಅಭಿವೃದ್ಧಿಗೂ ಶ್ರಮಿಸಿದ್ದರು. ನಾನು ಅವರಂತೆ ಜನ ಸೇವಕನಾಗಿ ಕೆಲಸ ಮಾಡುವೆ ನಿಮ್ಮ ಆಶೀರ್ವಾದ ನೀಡಿ ಎಂದರು.
ಈಗಾಗಲೇ ವಾರ್ಡಿನ ಜನ‌ ಸಂಪೂರ್ಣ ಬೆಂಬಲ ನೀಡಿದ್ದು ಇದರಿಂದ ಪ್ರತಿ ಪಕ್ಷದವರು ಈಗಾಗಲೇ ವಿಚಲಿತಗೊಂಡಿದ್ದಾರೆ. ನನ್ನ ಗೆಲುವು ನಿಶ್ಚಿತ ಎಂದರು.
ವಾರ್ಡಿನ ಅಭಿವೃದ್ಧಿಗೆ ಸದಾ ಸ್ಪಂದಿಸುವ ನಿಮ್ಮಂತವರಿಗೆ ಮತ ನೀಡಬೇಕೆಂದು. ಸದಾ ನೋವು-ನಲಿವಿಗೆ ನಮ್ಮ ಜೊತೆ ಇರುತ್ತೀರೆಂಬ ಭರವಸೆ ನಮಗಿದೆ ಎನ್ನುತ್ತಿದ್ದಾರೆ ವಾರ್ಡಿನ‌ ಮತದಾರರು.