11 ವರ್ಷಗಳ ಬಳಿಕ ಇತ್ಯರ್ಥಗೊಂಡ  ಬಾಗಳಿ ಗ್ರಾಮ ಸಾರ್ವಜನಿಕ ಆಸ್ಪತ್ರೆಯ ಜಮೀನಿನ ವಿವಾದ

.

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಮಾ.7; ತಾಲೂಕಿನ ಬಾಗಳಿ ಗ್ರಾಮದ ರಸ್ತೆ ಬದಿಯಲ್ಲಿರುವ  ಸಾರ್ವಜನಿಕ ಆಸ್ಪತ್ರೆಯ ಜಮೀನು ಲಕ್ಷಾಂತರ ರೂಪಾಯಿಗಳಿಗೆ ಬೆಲೆ ಬಾಳುವ ಸಾರ್ವಜನಿಕರ ಆಸ್ಪತ್ರೆಯ ಕಟ್ಟದ  ಜಾಗವು ಸರ್ಕಾರ ಹಾಗೂ ಖಾಸಗಿ ವ್ಯಕ್ತಿಯ ನಡುವೆ ನಡೆದ  ವಿವಾದವು ಸುಮಾರು 11 ವರ್ಷಗಳಿಂದ   ನ್ಯಾಯಾಲಯದ ಅಂಗಳದಲ್ಲಿದ್ದ ಪ್ರಕಣವನ್ನು ವಾದಿಯ ಪರ ವಕೀಲರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು, ಅಂತಿಮವಾಗಿ  ಹರಪನಹಳ್ಳಿ ಜೆ.ಎಂ.ಎಫ್.ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶರು ಅಂತಿಮತೀರ್ಪು ನೀಡಿದ್ದಾರೆ.ಸದರಿ ಪ್ರಕರಣದಲ್ಲಿ ಪ್ರತಿವಾದಿ ಸರ್ಕಾರದವರು ಖರೀದಿ ಪತ್ರವೆಂದು ಸುಳ್ಳು ಹೇಳಿ, ದಾನಪತ್ರವನ್ನು ಸೃಷ್ಟಿಸಿಕೊಂಡು ನಮ್ಮ ಜಮೀನಿನಲ್ಲಿ ಸಾರ್ವಜನಿಕ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದು ವಾದಿಯು ಹರಪನಹಳ್ಳಿ ಜೆ.ಎಂ.ಎಫ್.ಸಿ.ನ್ಯಾಯಾಲಯಲ್ಲಿ ಅಸಲು ದಾವೆ ಸಂಖ್ಯೆ 164/2013  ಪ್ರಕಣವನ್ನು ದಾಖಲಿಸಿದ್ದು, ಸದರಿ ಪ್ರಕರಣವನ್ನು ಸರ್ಕಾರಿ ಅಭಿಯೋಜಕಿಯಾದ ಮಿನಾಕ್ಷೀ ಎನ್. ಇವರು ಸರ್ಕಾರದ ಪರವಾಗಿ ವಾದವನ್ನು  ಮಂಡಿಸಿದ್ದರು. ಪರಸ್ಪರ ವಾದ ವಿವಾದವನ್ನು ಆಲಿಸಿದ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶರು ಅಂತಿಮವಾಗಿ  ಸರ್ಕಾರದ ಪರ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.