11 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಗೋವಿಂದರಾಜುಲು ಮತಯಾಚನೆ ದಯಪಾಲಿಸಿ ಎಂದ ದೇವೆಂದ್ರಪ್ಪ

ಬಳ್ಳಾರಿ ಏ 24 : ಯಾವುದೇ ಸಂದರ್ಭ ಇರಲಿ, ಬಳ್ಳಾರಿ ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ ಅವರು ದೈವದ ಮೊರೆ ಹೋಗಿ ನಂತರ ಮುಂದಿನದು ಎನ್ನುವವರು. ಅವರು ಚುನಾವಣೆ ಸಂದರ್ಭದಲ್ಲೂ ಇದನ್ನು ಬಿಡಲಾರರು. ಮತದಾರರೇ ನೀವು ನಮ್ಮ ದೇವರೆಂದು. ನಮ್ಮ ಬಿಜೆಪಿ ಅಭ್ಯರ್ಥಿಗೆ ಮತ ದಯಪಾಲಿಸಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಅವರು ಇಲ್ಲಿನ 11 ನೇವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದರಾಜುಲು ಅವರ ಪರವಾಗಿ ವಾರ್ಡಿನ ವಿವಿಧ ಪ್ರದೇಶಗಳಿಗೆ ಸಂಚರಿಸಿ ಮತಯಾಚನೆ ಮಾಡಿದರು.
ಗೋವಿಂದರಾಜುಲು ಅವರ ತಂದೆಯವರೂ ಸಹ ಮತದಾರರನ್ನು ದೇವರಂತೆ ಭಾವಿಸುವವರು. ಈ ಹಿಂಧೆ ಅವರು ಸಹ ಕಾಪೊರೇಟರ್ ಆಗಿ ವಿವಿಧ ಅಭಿವೃದ್ದಿ ಕಾರ್ಯಗಳ ಜೊತೆ ಮತದಾರರ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರಾಗಿದ್ದರು. ಅದೇ ರೀತಿ ಗೋವಿಂದರಾಜುಲು ಸಹ ಮತದಾರ ದೇವರುಗಳನ್ನು ಮರೆಯಲಾರರು ಎಂದು ಭರವಶೆ ನೀಡಿದರು.