11 ಧೂಮಪಾನ ಪ್ರಕರಣಗಳ ದಾಖಲು, 2050 ರೂ ದಂಡ ವಸೂಲಿ

ಕೆ.ಆರ್.ಪೇಟೆ.ಜ.06- ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮತ್ತು ಧೂಮಪಾನ ಮಾಡುತ್ತಿದ್ದವರ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಪಟ್ಟಣ ಪೆÇಲೀಸ್ ಠಾಣೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣ, ಕಿರಾಣಿ ಅಂಗಡಿ, ಟೀ ಅಂಗಡಿ, ವೈನ್ ಸ್ಟೋರ್, ಮಿಲಿಟರಿ ಹೋಟೆಲ್, ಸಣ್ಣಪುಟ್ಟ ಅಂಗಡಿಗಳು, ಸೇರಿದಂತೆ ಹಲವಾರು ಕಡೆಗಳಲ್ಲಿ ದಾಳಿ ಕೈಗೊಂಡು 11 ಪ್ರಕರಣಗಳನ್ನು ದಾಖಲಿಸಿಕೊಂಡು 2050 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾ ಸಲಹೆಗಾರ ತಿಮ್ಮರಾಜು ತಿಳಿಸಿದರು.
ದಾಳಿಯ ವೇಳೆ ಸಿಕ್ಕಿ ಬಿದ್ದವರಿಗೆ ತಂಬಾಕು ಸೇವನೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ ಇಂದಿನ ಯುವಕರು ತಂಬಾಕು ಉತ್ಪನ್ನಗಳು ದೂರ ಇರಬೇಕು ಹಾಗೂ ಶಾಲಾ-ಕಾಲೇಜುಗಳನ್ನು ಶೇ100 ತಂಬಾಕುಮುಕ್ತ ಮಾಡುವುದು, ಈ ದಾಳಿಗಳ ಉದ್ದೇಶವಾಗಿದ್ದು, ಪ್ರಪಂಚದಾದ್ಯಂತ ತಂಬಾಕು ಸೇವನೆಯಿಂದ ಪ್ರತಿವ?ರ್À 80 ಲಕ್ಷ ಜನ ಮರಣ ಹೊಂದುತ್ತಿದ್ದಾರೆ ರಾಜ್ಯದಲ್ಲಿ ಶೇಕಡ 28 ತಂಬಾಕು ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಪ್ರತೀ ಆರು ಸೆಕೆಂಡಿಗೆ ಒಬ್ಬರು ಮರಣ ಹೊಂದುತ್ತಿದ್ದು, ದೇಶದಲ್ಲಿ ಪ್ರತಿದಿನ 2500 ಜನ ತಂಬಾಕು ಉತ್ಪನ್ನಗಳಿಂದ ಸಾವನ್ನಪ್ಪುತ್ತಿದ್ದಾರೆ ಆದ್ದರಿಂದ ಅಂಗಡಿಯವರು ತಂಬಾಕು ಮಾರಾಟವನ್ನು ಶಾಲಾ ಕಾಲೇಜಿನಿಂದ 100 ಗಜ ದೂರದಲ್ಲಿ ಮಾರಾಟ ಮಾಡುವುದು ಹಾಗೂ 18 ವ?ರ್Àದ ಒಳಪಟ್ಟ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ನೀಡಬಾರದು. ತಂಬಾಕು ಸೇವನೆಯಿಂದ ಹೃದಯಾಘಾತ, ಅಸ್ತಮಾ, ಕ್ಷಯರೋಗ, ಕ್ಯಾನ್ಸರ್, ಲಕ್ವಾ, ಬಂಜೆತನ, ನಪುಂಸಕತ್ವ ಮುಂತಾದ ಕಾಯಿಲೆಗಳು ಬರುತ್ತಿದ್ದು ಜಿಲ್ಲಾ ಮತ್ತು ತಾಲೂಕು ಆಡಳಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ದಾಳಿ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಹಿರಿಯ ಆರೋಗ್ಯ ಪರಿವೀಕ್ಷಕ ಧಮೇರ್ಂದ್ರ ಸಾಮಾಜಿಕ ಕಾರ್ಯಕರ್ತ ಮೋಹನ್‍ಕುಮಾರ್, ಆರಕ್ಷಕ ಸಿಬ್ಬಂದಿ ಪುನೀತ್, ಸಿಡಿ ಬಲರಾಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ಚಿತ್ರಶೀರ್ಷಿಕೆ; 06 ಕೆ.ಆರ್.ಪಿ. 01; ಪಟ್ಟಣದ ವಿವಿಧ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಅಧಿಕರಿಗಳ ತಂಡ.