11 ದಿನದಲ್ಲಿ ಶೇ.42ರಷ್ಟು ಜನರಿಗೆ ಲಸಿಕೆ

ನವದೆಹಲಿ, ಜ.೧೪- ದೇಶದಲ್ಲಿ ಹದಿಹರೆಯದವರಿಗೆ ಲಸಿಕೆ ನೀಡಲು ಆರಂಭವಾದ ಹನ್ನೊಂದು ದಿನಗಳಲ್ಲಿ ಶೇಕಡಾ ೪೨ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ತಿಳಿಸಿದ್ದಾರೆ.
ಜನವರಿ ೩ರಿಂದ ೧೫ರಿಂದ ೧೮ ವರ್ಷ ವಯೋಮಾನದ ಮಂದಿಗೆ ಲಸಿಕೆ ನೀಡಿಕೆ ಆರಂಭವಾಗಿದ್ದು ಈ ತಿಂಗಳ ಅಂತ್ಯದ ವೇಳೆಗೆ ಶೇಕಡ ೮೦ ರಿಂದ ೮೦ರಷ್ಟು ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಜನವರಿ ಅಂತ್ಯದ ವೇಳೆಗೆ ೭.೪೦ ಕೋಟಿ ಹದಿಹರೆಯದ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ದಿನದಿಂದ ದಿನಕ್ಕೆ ಲಸಿಕೆ ನೀಡಿಕೆ ಬೇಗ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ೪೩.೩೫ ಲಕ್ಷ ಡೋಸ್ ಅರ್ಹ ಯುವಜನರು ಪಡೆದಿದ್ದಾರೆ. ಮಧ್ಯಪ್ರದೇಶದಲ್ಲಿ ೨೭.೫೫ ಲಕ್ಷ ಮಂದಿ, ಬಿಹಾರದಲ್ಲಿ ೨೫.೦೩ ಲಕ್ಷ ಆಂಧ್ರಪ್ರದೇಶದಲ್ಲಿ ೨೧.೩೦ ಲಕ್ಷ , ಗುಜರಾತ್ ನಲ್ಲಿ ೨೦.೬೮ ಲಕ್ಷ , ಮಹಾರಾಷ್ಟ್ರದಲ್ಲಿ ೨೩.೯೪ ಲಕ್ಷ, ರಾಜಸ್ತಾನದಲ್ಲಿ ೨೩.೬೮ ಲಕ್ಷ, ತಮಿಳುನಾಡಿನಲ್ಲಿ ೧೮.೦೭ ಲಕ್ಷ ಹದಿಹರೆಯದ ಮಂದಿ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ೪.೫೯ ಲಕ್ಷ ನಂದಿ ೧೫ರಿಂದ ೧೭ ವರ್ಷ ವಯೋಮಾನದ ಮಕ್ಕಳು ಲಸಿಕೆ ಪಡೆದಿದ್ದಾರೆ ಇದುವರೆಗೂ ಮೂರು ಕೋಟಿಗೂ ಹೆಚ್ಚು ಯುವಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನಷ್ಟು ಅರ್ಹ ಹದಿಹರೆಯದ ಮಂದಿ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.