11ರಂದು ಕರವೇ ರಾಜ್ಯೋತ್ಸವ ಸಂಭ್ರಮ

(ಸಂಜೆವಾಣಿ ವಾರ್ತೆ)
ಸುರಪುರ: ನ.9:ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಇದೇ ನವೆಂಬರ್ 11 ರಂದು ನಡೆಯಲಿರುವ ಕ.ರ.ವೇ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸುವ ಮೂಲಕ ಕಾರ್ಯಕ್ರಮದ ಭಿತ್ತಿ ಪತ್ರ ಮತ್ತು ಆಮಂತ್ರಣ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ಕೋವಿಡ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಮಾಡಲಾಗಿರಲಿಲ್ಲ. ಈ ಬಾರಿಯ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಪವರ ಸ್ಟಾರ ಪುನೀತ್ ರಾಜಕುಮಾರ್ ವೇದಿಕೆ ಮೇಲೆ ಕರವೇ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ನಾಯಕ ಬೈರಿಮಡ್ಡಿ ಮಾತನಾಡಿ ಕನ್ನಡಿಗರ ದ್ವನಿಯಾಗಿ ಕೆಲಸ ಮಾಡುತ್ತಾ ಬಂದಿರುವ ಕರವೇ, ತಾಲ್ಲೂಕಿನಲ್ಲಿ 17 ನೇ ವರ್ಷದ ಕಾರ್ಯಕ್ರಮ ಆಚರಿಸುತ್ತಿದೆ. ಕೋವಿಡ ಇರುವ ಕಾರಣ ಸರಳವಾಗಿ ಆಚರಿಸಲಾಗುವುದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಜೊತೆಗೆ ಏಳು ಜನ ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು ಮತ್ತು ಸರಿಗಮಪ ಖ್ಯಾತಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜೊತೆಗೆ ಸ್ಥಳಿಯ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದ್ದು. ಕನ್ನಡಾಭಿಮಾನಿಗಳು ಕೋವಿಡ ನಿಯಮದಂತೆ ಪಾಲ್ಗೊಳ್ಳಲು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ತಾಲ್ಲೂಕು ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ಶ್ರೀನಿವಾಸ ಭೈರಿಮಡ್ಡಿ, ಆನಂದ ಮಾಚಗುಂಡಾಳ, ಹಣಮಂತ ಹಾಲಗೇರಾ, ಭೀಮನಗೌಡ ಗೌಡಗೇರಿ, ಸೋಮಯ್ಯ ಹಾಲಗೇರಾ, ಶ್ರೀಶೈಲ ಕಾಚಾಪೂರ, ವಿಧ್ಯಾರ್ಥಿ ಘಟಕದ ಶಾಂತಗೌಡ ದೇವಾಪೂರ, ಕೆಂಭಾವಿ ವಲಯದ ಕುಮಾರ ಮೋಪಗಾರ,ಕಕ್ಕೇರಾ ವಲಯದ ಆದಯ್ಯ ಗುರಿಕಾರ, ಮಲ್ಲನಗೌಡ ಕಕ್ಕೇರಾ, ವಿವಿಧ ಗ್ರಾಮ ಶಾಖೆಯ ಬಲಭೀಮ ಬೊಮ್ನಳ್ಳಿ, ಭೀಮರಾಯ ಬಾದ್ಯಾಪೂರ, ನಿಂಗಪ್ಪ ಗೌಡ ರುಕ್ಮಾಪೂರ, ರಾಮನಗೌಡ ಶಖಾಪೂರ, ಭೀಮಣ್ಣ ಹಾಲಗೇರಾ, ಮರೆಪ್ಪ ಬೇವಿನಾಳ, ಷಣ್ಮುಖ ಅಡ್ಡೋಡಗಿ, ಗೋಪಾಲ ವಾಗಣಗೇರಿ, ಭೀಮು ಜಾಲಿಬೆಂಜಿ, ವೆಂಕೋಬ ಲಿಂಗದಳ್ಳಿ, ಪ್ರಭು ಮಂಗಿಹಾಳ, ಮಹಾಂತೇಶ ಚೌಡೇಶ್ವರಿಹಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು