11ನೇ ಶತಮಾನದಲ್ಲಿ ರಚಿಸಿಕೊಂಡ ವಚನ ಸಾಹಿತ್ಯವೇ ಸಂವಿಧಾನದ ಮೂಲ:ವಿ. ಮನೋಹರ

ಕಲಬುರಗಿ:ಜು.29:ಕನ್ನಡದಲ್ಲಿ ವಚನ ಸಾಹಿತ್ಯ ರಚನೆ ಮಾಡಿದ ಪ್ರಥಮ ವಚನಕಾರರ ವಾರಸ್ಸುದಾರರಾದ ನಾವು, ಎಂದು ಹೇಳುವ ಅಭಿಮಾನ, ಸ್ವಾಭಿಮಾನಿ ಕನ್ನಡಿಗರಾಗಿ, ಕನ್ನಡ ಉಳಿಸುವ ಕಾರ್ಯ ಮಾಡಬೇಕಾಗಿದೆ. 25 ವರ್ಷಗಳ ಹಿಂದೆ ದಾಸಿಮಯ್ಯನವರ ವಚನ ಸಾಹಿತ್ಯಕ್ಕೆ ನಾಂದಿ ಹಾಡಿ ಡಾ. ರಾಜಕುಮಾರ ಮೂಲಕ ಹಾಡಿಸಿದ ಕೀರ್ತಿ ಸಲ್ಲುತ್ತದೆ. ಆದರೆ ಇಂದು ಸ್ವಯಂ ಕಣ್ಣಿನಿಂದ ನೋಡಿದ ಸ್ಥಳ ಈ ರೀತಿ ಹಾಳಾಗುವುದನ್ನು ನೋಡಿ ಖೇದವಾಗುತ್ತದೆ ಎಂದು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಆದ್ಯ ವಚನಕಾರರಾದ ಮುದನೂರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ ನಂತರ ಖ್ಯಾತ ಚಲನಚಿತ್ರ ನಟ ಹಾಗೂ ಸಂಗೀತ ಸಂಯೋಜಕರಾದ ವಿ. ಮನೋಹರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಸ್ಥಳೀಯರ ಇಚ್ಛಾಶಕ್ತಿ ಇಲ್ಲವೇ ? ಪ್ರತಿನಿಧಿಗಳು ನಿದ್ದೆ ಮಾಡುತ್ತಿದ್ದಾರೆಯೇ ? ಒಂದು ಪವಿತ್ರಸ್ಥಳ ಈಗಾಗಲೇ ವಿಶ್ವಮಾನ್ಯ ಪ್ರವಾಸಿ ಕೇಂದ್ರವಾಗಬೇಕಾಗಿತ್ತು. ಇಲ್ಲಿರುವ ಸಪ್ತ ಕಲ್ಯಾಣಿಗಳ ಸಂರಕ್ಷಣೆ ಮಾಡಲೇಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ,. ಕೇಂದ್ರ ಪ್ರಾಚ್ಯವಸ್ತು ಸಂಗ್ರಾಹಲಯ ಇಲಾಖೆ ಕೂಡಾ ಬರಿ ಫಲಕ ಹಾಕಿ ಹೋದರೆ ಆಗದು, ಇದನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಾಂಸ್ಕøತಿಕವಾಗಿ ಸಮೃದ್ದವಾದ ಸ್ಥಳ ಮಹಿಮೆ ಪ್ರಚಾರ, ಪ್ರಸಾರವಾಗಬೇಕು ಈ ನಿಟ್ಟಿನಲ್ಲಿ ನಮ್ಮ ಕಡೆಯಿಂದ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಬೆಂಗಳೂರಿಗ ಹೋಗಿ ತಕ್ಷಣವೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
11ನೇ ಶತಮಾನದಲ್ಲಿ ಶರಣ ಧರ್ಮ, ಶರಣ ಸಾಹಿತ್ಯ ರಚನೆಗೆ ಮುನ್ನುಡಿ ಹಾಕಿ ಹೋದ ಮಹಾನ ಶರಣ, ಆದ್ಯ ವಚನಕಾರರ ಪ್ರಥಮ ಕನ್ನಡ ವಚನ ಸಾಹಿತ್ಯದ ಬ್ರಹ್ಮನ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯವೇ ಸ್ಥಾಪಿಸಬೇಕು ಎಂದು ಕೋರುತ್ತೇನೆ.
ಅವರು ಬರೆದ 179 ವಚನಗಳ ಅಧ್ಯಯನವಾಗಬೇಕು ಅಧ್ಯಯನ ಕೇಂದ್ರ ಸ್ಥಾಪಿಸಬೇಕು, ಅಲ್ಲದೆ 108 ಶೈವ ದೇವಸ್ಥಾನಗಳ ರಕ್ಷಣೆಗಾಗಿ, ಉತ್ಖನವಾಗಬೇಕು. ಅಲ್ಲಿರುವ ನಿರ್ಗತಿಕರಿಗೆ ಸೂಕ್ತ ಪರಿಹಾರಿ ನೀಡಿ, ಸ್ಥಳಾಂತರಗೊಳಿಸಿ ಪ್ರವಾಸಿ ತಾಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಸಹ ನಿರ್ದೇಶಕ ಮಂಜುನಾಥ ಪಾಂಡವಪೂರ ಮಾತನಾಡುತ್ತ ಕೊನೆ ಪಕ್ಷ ದಾಸಿಮಯ್ಯನವರ ಕುರಿತು ಒಂದು ಕಿರುಚಿತ್ರ ಅಥವಾ ಸರಣಿ ದಾರಾವಾಹಿ ರಚಿಸುವ ಮೂಲಕ ಕನ್ನಡ ಸಾಂಸ್ಕøತಿಕ ಲೋಕದಲ್ಲಿ ಮನೆ ಮಾತಾಗುವಂತೆ ಮಾಡುವ ಕೆಲಸ ನಮ್ಮದಾಗಿದೆ ಎಂದರು
ಮೊದಲಿಗೆ ವಚನ ಸಾಹಿತ್ಯ ವಿಚಾರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶಾಂತರೆಡ್ಡಿ ಚೌಧರಿಯವರು ಆಗಮಿಸಿದ ವಿ. ಮನೋಹರ, ಸಹ ನಿರ್ದೇಶಕ ಮಂಜು ಪಾಂಡವಪೂರ ಹಾಗೂ ಕಲಬುರಗಿ ಕಲಾವಿದ ಅಶೋಕ ಕಾಳೆಯವರನ್ನು ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಮಾತನಾಡುತ್ತ ವಿ.ಮನೋಹರವರು ಸುಮಾರು 2ಗಂಟೆಗಳ ಕಾಲ ಈ ಧಾರಾಕಾರ ಮಳೆಯಲ್ಲಿ ಬಿದ್ದು ಹೋದ ಹಾಳಾದ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ಕಳವಳಗೊಂಡ ಹಿನ್ನೆಲೆಯಲ್ಲಿ ನಿರ್ಲಕ್ಷಗೊಂಡ ವಿಶ್ವಮಾನ್ಯ ಶರಣ ದಾಸಿಮಯ್ಯನವರ ಕುರಿತು, ಚಲನ ಚಿತ್ರ ನಿರ್ಮಾಣವಾಗುವುದು ಸೂಕ್ತ, ಸದ್ಯಕ್ಕೆ ಒಂದು ಟಿಲಿಫಿಲ್ಮ ನಿರ್ಮಿಶಿ ಜನರಿಗೆ ತಿಳಿಸಿದರೆ ವಿಶ್ವಕ್ಕೆ ವಿ. ಮನೋಹರವರ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ. ಆ ನಿಟ್ಟಿನಲ್ಲಿ ನಾವು-ನೀವು ಅಲ್ಲದೆ ಗ್ರಾಮದ ಪ್ರಜ್ಞಾವಂತರು ಸಹಕಾರ ನೀಡಿದ್ದೇ ಆದರೆ ಈ ಸ್ಥಳವನ್ನು ವಿಶ್ವವೇ ಗಮನ ಸೆಳೆಯುಂತಹ ಪ್ರವಾಸಿ ಕೇಂದ್ರವಾಗುತ್ತದೆ ಎಂದರು.
ಕೊನೆಯಲ್ಲಿ ಕಲಬುರಗಿಯ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗು ನ್ಯಾಯವಾದಿ ಜೇನೆವರಿ ವಿನೋದಕುಮಾರ ಎಲ್ಲರನ್ನು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಂಕರಗೌಡ ಬಗಲಾಪೂರ, ಸಿದ್ದಣ್ಣಗೌಡ ಪಡೆಕ್ಕನೂರ, ರಮೇಶ ಕೊಳ್ಳಿ, ಸುಗೂರೇಶ ಹಿರೇಮಠ, ಭೀಮಣ್ಣ ಹೂಗಾರ, ಗೋಪಾಲರೆಡ್ಡಿ ಹೊಸಮನಿ, ಹೊನ್ನಪ್ಪಗೌಡ ಮೇಟಿ, ರಮೇಶ ಚೌಧರಿ, ಮಹೇಶ ರಡ್ಡಿ ಇತರರು ಉಪಸ್ಥಿತರಿದ್ದರು.