11ನೇ ವಾರ್ಡಿನಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟಿಸಿದ ಅಲ್ಲಂ ಪ್ರಶಾಂತ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಪ್ರಸಕ್ತ ಚುನಾವಣೆ ಹಿನ್ನಲೆಯಲ್ಲಿ ಇಂದು ನಗರ್ 11 ನೇ ವಾರ್ಡಿನಲ್ಲಿ ಚುನಾವಣಾ ಕಾರ್ಯಚಟುವಟಿಕೆ ಮತ್ತು ಕಾರ್ಯಕರ್ತರ ಸಿದ್ದತೆಗೆ ಕಾಂಗ್ರೆಸ್ ಕಚೇರಿಯನ್ನು ಚುನಾವಣಾ ಪ್ರಚಾರ ಸಮಿತಿಯ ಸಂಚಾಲಕ ಅಲ್ಲಂ‌ಪ್ರಶಾಂತ್ ಅವರು ವಾರ್ಡಿನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮತದಾರರ ಮನೆ ಮನೆಗೆ ತೆರಳಿ ಮನವಿ‌ ಮಾಡೋಣ  ಎಂದರು.
ಪಾಲಿಕೆ ಮಾಜಿ ಸದಸ್ಯ ಸೋಮಪ್ಪ, ಮುಖಂಡರಾದ ಡೋಣಪ್ಪ, ಅನಿಲ್ ಮೊದಲಾದವರು ಇದ್ದರು