11ನೇ ವರ್ಷದ ವಿಪ್ರ ವಟು ಶಿಕ್ಷಣ ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ. ಮೇ.೧೮; ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ 11ನೇ ವರ್ಷದ ವಿಪ್ರ  ವಟು ಶಿಕ್ಷಣ ಶಿಬಿರವನ್ನು ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ನಡೆಸಲಾಗುತ್ತಿದೆ. ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಗಳ ನೇತೃತ್ವದಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿರುವ ಶಿಬಿರದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಟುಗಳು ಪಾಲ್ಗೊಂಡಿರುತ್ತಾರೆ, ವೇದ ಅಧ್ಯಯನ, ಭಗವದ್ಗೀತೆ ಹಾಗೂ  ಶ್ರೀ ವಿಷ್ಣು ಸಹಸ್ರನಾಮ ಹೇಳಿಕೊಡಲಾಗುತ್ತಿದೆ, ವೇದ ಶಿಕ್ಷಕರುಗಳಾಗಿ  ಡಿ.ಕೆ.  ಸತ್ಯನಾರಾಯಣಮೂರ್ತಿ, ದತ್ತಾತ್ರೇಯ ಜೋಶಿ, ಪುಟ್ಟಸ್ವಾಮಿ, ಹರೀಶ್, ಸುಬ್ರಮಣ್ಯ ಶರ್ಮ. ಭಗವದ್ಗೀತೆಯನ್ನು ಹೇಳಿಕೊಡುತ್ತಿದ್ದು, ಶ್ರೀಮತಿ ಸಾವಿತ್ರಿ ಭಟ್ ಹಾಗೂ ವಿಷ್ಣು ಸಹಸ್ರನಾಮ ಶ್ರೀಮತಿ ಡಾ. ರೂಪ ಶಶಿಕಾಂತ್ ಲ ಹೇಳಿಕೊಡುತ್ತಿದ್ದಾರೆ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಡಾ. ಶಶಿಕಾಂತ್,  ವಿನಾಯಕ ಜೋಶಿ, ಬಾಲಕೃಷ್ಣ ವೈದ್ಯ, ಎಸ್. ಪಿ. ಸತ್ಯನಾರಾಯಣ ರಾವ್, ಗೋಪಾಲ್ ರಾವ್,  ರಾಮಚಂದ್ರರಾವ್ ಇವರುಗಳು ಉಸ್ತುವಾರಿಯಲ್ಲಿ ಶಿಬಿರವು ನಡೆಯುತ್ತಿದೆ…ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಪಿ. ಸಿ. ರಾಮನಾಥ್ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಅನಿಲ್ ಬಾರಂಗಳ ಶಿಬಿರಕ್ಕೆ ಭೇಟಿಕೊಟ್ಟು ಶುಭ ಹಾರೈಸಿದರು…..