109 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಮತದಾನ ಜಾಗೃತಿ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಮೇ.7: ವತಿಯಿಂದ ಆಯೋಜಿಸಿದ 109 ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮ ಹಳ್ಳಿಖೇಡ (ಕೆ) ದಲ್ಲಿ ಆಯೋಜಿಸಲಾಯಿತು, ಕಾರ್ಯಕ್ರಮದ ಉದ್ಘಾಟನೆಯನ್ನು ಶಶಿಧರ ಪಾಟೀಲ ಅಧ್ಯಕ್ಷರು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಹುಮನಾಬಾದ ವಹಿಸಿಕೊಂಡು ಮಾತನಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಜನರ ಮದ್ಯ ಅನೇಕ ಸಾಹಿತ್ಯ ಆಸಕ್ತರ ಜೊತೆಯಲ್ಲಿ ಕಾರ್ಯ ಮಾಡುತ್ತಿದ್ದು ಇಂತಹ ಜನಪರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಹಿಗೆ ಮುಂದೆ ಸಹ ಪರಿಷತ್ತಿನ ಕಾರ್ಯ ನಿರಂತರ ನಡೆಯಲಿ ಎಂದು ಹಾರೈಸಿದರು , ಕಾರ್ಯಕ್ರಮದ ಆಶಯ ನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾದಕ್ಷರಾದ ಮಾಣಿಕಪ್ಪಾ ಬಕ್ಕನ ಮಾತನಾಡಿ ಕಸಾಪ ಎಲ್ಲಾ ವರ್ಗದಲ್ಲಿ ತನ್ನದೆ ಆದ ರೀತಿಯಲ್ಲಿ ಜನಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಾಹಿಸುತ್ತಿದೆ ಇಂದಿಗೆ 109 ವರ್ಷ ಪೂರೈಸಿ ಅನೇಕ ಸಾಹಿತಿಗಳಿಗೆ ಸಾಹಿತ್ಯ ಆಸಕ್ತರಿಗೆ ವೇದಿಕೆ ಕಲ್ಪಿಸುವ ಕಾರ್ಯ ನಿರಂತರ ಮಾಡುತ್ತದೆ ಎಂದು ನುಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪ ವಲಯ ಘಟಕ ಗೌರವ ಅಧ್ಯಕ್ಷರಾದ ಸುಭಾಷ ವಾರದ ವಹಿಸಿಕೋಂಡಿದರು, ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಕಸಾಪ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ ಸುಗಿ ಮಾತನಾಡಿ ಸಾಹಿತ್ಯ ಭಾಷೆ ಸಂಸ್ಕøತಿ ಎಲ್ಲವೂ ಒಂದೇ ವೇದಿಕೆ ಮೇಲೆ ಕಲ್ಪಿಸುವ ಸಂಘ ಸಂಸ್ಥೆ ಎಂದರೆ ಕನ್ನಡ ಸಾಹಿತ್ಯ ಪರಿಷತ್ತು ಸುಮಾರು 100 ವರ್ಷ ಹಳೆಯದಾದ ಕನ್ನಡಿಗರ ಸಂಸ್ಥೆ ಕಸಾಪ ಇಂತಹ ಸಂಸ್ಥೆಗೆ ಅನೇಕ ಯುವಕರು ಯುವ ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿ ಮಾಡುವಂತೆ ಕರೆ ಕೊಟ್ಟರು, ಅದರಂತೆ ಜಾಗತಿಕ ದಿನದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ ಇರುವ ರಾಷ್ಟ್ರ ಭಾರತ, ಪ್ರಜಾಪ್ರಭುತ್ವದಲ್ಲಿ ಮತದಾನಾದ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ ಚೌಹ್ವಾಣ ಮಾತನಾಡಿ ಮತದಾನ ನಮ್ಮ ಹಕ್ಕು ಪ್ರತಿಯೋಬ್ಬರು ತಪ್ಪದೆ ಮತದಾನ ಮಡಬೆಕು ನಮ್ಮ ರಾಷ್ಟ್ರ ನಿರ್ಮಾಣ ನಮ್ಮ ಯುವಕರ ಕೈಯಲ್ಲಿದೆ ಯಾರು ಯಾವದೆ ಕಾರಣಕ್ಕು ಮತದಾನದಿಂದ ವಂಚಿತರಾಗಬಾರದು ಮತದಾನ ಮಾಡೋಣ, ಮತದಾನ ಮಾಡೀಸೋಣ, ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಹೋಣೆ ಎಂದು ಮತದಾನದ ಮಹತ್ವ ತಿಳಿಸಿದರು, ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಸಿದ್ಧಲಿಂಗ ವಿ ನಿರ್ಣಾ ಮಾತನಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇಂದು 109 ನೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸುವದರ ಜೋತೆಯಲ್ಲಿ ಮತದಾನದ ಮಹತ್ವ ಜಾಗೃತಿ ಹೀಗೆ ಅನೇಕ ಕಾರ್ಯ ಪರಿಷತ್ತಿನಿಂದ ನಿರಂತರ ಮಾಡಿಕೊಂಡು ಬರುತ್ತಿದೆ, ಇಂತಹ ಕಾರ್ಯಕ್ರಮ ಮಾಡುವದು ನಮ್ಮ ಕಸಾಪಗೆ ಹೆಮ್ಮೆ ಅನಿಸುತ್ತದೆ ಇಂತಹ ಕಾರ್ಯ ಮುದೆ ಸಹ ತಮ್ಮೆಲ್ಲರ ಸಹಕಾರದಿಂದ ನಡೆಸಿಕೊಂಡು ಹೋಗುತ್ತೆವೆ ಎಂದು ನುಡಿದರು, ಕಾರ್ಯಕ್ರಮದಲ್ಲಿ ಭಕ್ತರಾಜ ಜಿತಾಪೂರೆ, ಆರ ಎಮ್ ಭಂಕಲಗಿ ,ಅಣ್ಣಾರಾವ ರಟಗಲ್,ಮಹೇಶ ಕೋಳಿ, ಇಂದ್ರಕರಣ ಬಿರಾದರ, ಪ್ರಭು ಬಿರಾದಾರ, ಪ್ರಕಾಶ, ಭಿಮಶಾ ಕೋರಿ, ರಮೇಶ್ ವಾರದ, ಉದಯ ವಾರದ ಮಹಾದೇವಿ ಹಿರೇಮಠ ಇತರರಿದ್ದರು. ಕಾರ್ಯಕ್ರಮವನ್ನು ಕಸಾಪ ಗೌರವ ಕಾರ್ಯದರ್ಶಿಗಳಾದ ಭುವನೇಶ್ವರಿ ನಿರ್ವಹಿಸಿದರು, ಗೌರವ ಸಲಹೆಗಾರರಾದ ಸಿದ್ರಾಮ ಇಂಡಿ ಸ್ವಾಗತಿಸಿದರು,ಮೈಲಾರಿ ಬುಕ್ಕಾ ವಾದಿಸಿದರು , ಅನೇಕ ಕನ್ನಡಪರ ಆಸಕ್ತರು ಮಹಿಳೆಯರು ಭಾಗವಹಿಸಿದರು