108 ಬಾರಿ ಸಾಮೂಹಿಕ ರಾಮಮಂತ್ರ ಪಠಣ

ಕಲಬುರಗಿ,ಮಾ 30: ನಗರದ ಜೇವರಗಿ ರಸ್ತೆ ರಾಮಮಂದಿರದಲ್ಲಿ ಇಂದು ಶ್ರೀರಾಮ ನವಮಿ ನಿಮಿತ್ತ ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾ ಘಟಕ ದಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು 108 ರಾಮ ಮಂತ್ರ ಪಠಣ ಜರುಗಿತು. ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ್, ರಾಮಾಚಾರ್ಯ ನಗನೂರ,ಅನಿಲ್ ಕುಲಕರ್ಣಿ,ಸುರೇಶ್ ಕುಲಕರ್ಣಿ, ವಿನುತ ಜೋಶಿ, ಡಾ.ಕೃಷ್ಣ ಕಾಕಲವಾರ,ಪ್ರಾಣೇಶ ಮುಜುಮಂದಾರ,ಲಕ್ಷ್ಮಣರಾವ ದೇಶಪಾಂಡೆ,ಡಾ ಸಂಜಯ ಕುಲಕರ್ಣಿ,ಡಾ ಶ್ರೀನಿವಾಸ ರಾವ ಜಾಗೀರದಾರ,ಆರ್.ಕೆ ಕುಲಕರ್ಣಿ, ಎಚ್.ವಿ ಕುಲಕರ್ಣಿ, ಎನ್ .ವಿ ಕುಲಕರ್ಣಿ ಶಾಮಸುಂದರ್ ಕುಲಕರ್ಣಿ, ಶೇಷಗಿರಿ ಹುಣಸಗಿ,ಅಪ್ಪಾರಾವ್,ಸಂಕರ್ಷಣ ,ಸಮೀರ್ ವೆಂಕಟರಾವ್ ,ಸಂಜೀವ್ ಮಹಿಪತಿ ,ಪಾದೂರು ರಾಮಕೃಷ್ಣ ತಂತ್ರಿ ಚಾರಿಟೇಬಲ್ ಟ್ರಸ್ಟ್ ನ ಕಿಶೋರ್ ದೇಶಪಾಂಡೆ, ಗಿರಿಧರ ಭಟ್,ವ್ಯಾಸರಾಜ್ ಸಂತೆಕೆಲ್ಲೂರ,ವಿಜಯಕುಮಾರ್ ಕುಲಕರ್ಣಿ ಉಪಸ್ಥಿತರಿದ್ದರು.