108 ಕಿಲೋಮೀಟರ್ 37 ಹಳ್ಳಿ ಹಳ್ಳಿಗೆ ಪಾದಯಾತ್ರೆ : ಮಾಜಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್

ಸೇಡಂ,ಜು,26: 75ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಅಂಗವಾಗಿ ತಾಲೂಕಿನ (ಇದೇ ತಿಂಗಳ 29 ರಿಂದ ಆಗಸ್ಟ್ 20ರವರೆಗೆ) ಯಾನಗುಂದಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಪ್ರತಿ ಹಳ್ಳಿಗಳನ್ನು ದಾಟಿ ಸುಲಪೇಟ ಗ್ರಾಮದವರಿಗೆ ಒಟ್ಟು 108 ಕಿಲೋಮೀಟರ್ 37 ಹಳ್ಳಿ ಹಳ್ಳಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ಊಡಗಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷರಾದ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.
ಈ ವೇಳೆಯಲ್ಲಿ ಶಿವಶರಣ ರೆಡ್ಡಿ ಪಾಟೀಲ್ , ಹೇಮರೆಡ್ಡಿ ಪಾಟೀಲ್ , ಗಪೂರ್, ಜಗನಾಥ್ ಚಿಂತಪಳ್ಳಿ, ರಾಹುಲ್ ಊಡುಗಿ, ರಾಜಶೇಖರ್ ಪುರಾಣಿ, ಕಾಂಗ್ರೆಸ್ಸಿನ ಅನೇಕ ಕಾರ್ಯಕರ್ತರು ಇದ್ದರು.