108 ಆಂಬ್ಯುಲೇನ್ಸ್‍ಗೆ ಚಾಲನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ,ನ.11: ರಾಜ್ಯ ಸರ್ಕಾರವು ಸಾರ್ವಜನಿಕರ ಜೀವ ಉಳಿಸಲು ತುರ್ತು ಸೇವೆಗಾಗಿ ನಗರ ಮಟ್ಟದಲ್ಲಿಯೂ ಆಂಬ್ಯುಲೆನ್ಸ್ ಸೌಲಭ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ಚಾಲನೆ ನೀಡಿದರು.
ನಗರದಲ್ಲಿನ ತಮ್ಮ ಕಾರ್ಯಾಲಯದ ಆವರಣದಲ್ಲಿ ನಿನ್ನೆ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಳ್ಳಾರಿ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಿಗೆ ಹಾಗೂ ಹತ್ತಿರದ ಗ್ರಾಮಗಳಿಗೂ ಸಹ ಸಹಕಾರಿಯಾಗುವ ಆಂಬ್ಯುಲೇನ್ಸ್‍ನಲ್ಲಿ ತೀವ್ರ ರೀತಿಯ ಉಸಿರಾಟದ ತೊಂದರೆ ಇರುವ ಅಥವಾ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯಕವಾಗಲು ವೆಂಟಿಲೇಟರ್ ವ್ಯವಸ್ಥೆ ಇದೆ ಮತ್ತು ಹೃದಯ ಸಂಬಂಧಿ ಕಾಯಿಲೆ ಇದ್ದಲ್ಲಿ ಡಿಫಿಬೀಲೇಟರ್ ಹಾಗೂ ಇ.ಸಿ.ಜಿ ಯಂತ್ರವಿದ್ದು ತರಬೇತಿ ಪಡೆದ ಶೂಶ್ರುಷಕ ಅಧಿಕಾರಿಗಳು ಇರುವುದರಿಂದ ಆಂಬ್ಯುಲೇನ್ಸ್ ವಾಹನದ ಸೌಲಭ್ಯವನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ ಅಪಘಾತಕ್ಕೊಳಗಾದವರು, ಬೆಂಕಿ ಅವಘಡಗಳಿದವರು ಹಾಗೂ ಹೆರಿಗೆಗಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವಾಹನವು ತುಂಬಾ ಸಹಕಾರಿಯಾಗಿದೆ. ಅಗತ್ಯವುಳ್ಳವರಿಗೆ ಪ್ರಾಥಮಿಕ ಚಿಕಿತ್ಸೆಯ ಜೋತೆಗೆ ಐಸಿಯು ಘಟಕದಲ್ಲಿ ಒದಗಿಸಬಹುದಾದ ಸೌಲಭ್ಯವನ್ನು ಅಂಬ್ಯುಲೇನ್ಸ್‍ನಲ್ಲಿ ಒದಗಿಸಬಹುದಾಗಿದೆ. ಹಾಗೆಯೇ ಹೆಚ್ಚಿನ ಚಿಕಿತ್ಸೆಗೆ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ  (ಓಪಿಡಿ)ಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಲು ಮತ್ತು ವ್ಯಕ್ತಿಯ ಜೀವ ಉಳಿಸಲು ಆಂಬ್ಯುಲೇನ್ಸ್ ವಾಹನವು ಸಹಾಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್‍ಎಮ್‍ಡಿಸಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಯಿಸ್ ಥಾಮಸ್, ಜಿಕೆವಿಕೆ ವಿಭಾಗೀಯ ವ್ಯವಸ್ಥಾಪಕ ಸದಾನಂದ ಬಜಾರ್‍ಮನಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್ ಅನೀಲ್‍ಕುಮಾರ, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಸೇವಾ ಅಭಿಯಂತರ ವಿಜಯ್‍ಕುಮಾರ್ ಪಿ, ಜಿ.ಕೆ.ವಿ.ಕೆ ಜಿಲ್ಲಾ ವ್ಯವಸ್ಥಾಪಕರ ವಿನಯ್‍ಕುಮಾರ್, ಜಿಲ್ಲಾ ಸಂಯೋಜಕ ನವೀನ್ ಕುಮಾರ್, 108 ವಾಹನದ ಸಿಬ್ಬಂದಿ ಇದ್ದರು.